ನ್ಯೂಸ್ ನಾಟೌಟ್: ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ಗಳು ದರ ಪರಿಷ್ಕರಣೆ ಮಾಡಿವೆ. ಇದರಿಂದಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆ ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿ ಹೆಚ್ಚಳವಾಗಿದೆ. ಈ ಮೊದಲು ಮುಂಬೈನಲ್ಲಿ ಪ್ರತಿ ಸಿಲಿಂಡರ್ ಬೆಲೆ ₹ 1,684 ಇತ್ತು ಎಂದು ವರದಿ ತಿಳಿಸಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ (Commercial LPG Cylinder Price) 100 ರೂ. ಏರಿಕೆ ಮಾಡಲಾಗಿದ್ದು, ಇಂದಿನಿಂದ (ಬುಧವಾರ) ಈ ದರ ಜಾರಿಗೆ ಬರಲಿದೆ ಎಂದು ವರದಿ ತಿಳಿಸಿದೆ.
ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು ಜಾರಿ ಮಾಡಿರುವ ಈ ದರದಿಂದ ಗ್ರಾಹಕರ ಜೇಬಿಗೆ ಮತ್ತೆ ಹೊರೆಬೀಳಲಿದೆ. ವಾಣಿಜ್ಯ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳು ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆಗಳಿಗೆ ಒಳಗಾಗುತ್ತವೆ ಎಂದು ವರದಿ ತಿಳಿಸಿದೆ.
ಪರಿಷ್ಕರಣೆಯೊಂದಿಗೆ 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ (LPG Cylinder) ಈಗ ದೆಹಲಿಯಲ್ಲಿ 1,731 ರೂ. ನಿಂದ 1,833 ರೂ., ಮುಂಬೈನಲ್ಲಿ 1,785.50 ರೂ., ಕೋಲ್ಕತ್ತಾದಲ್ಲಿ ರೂ.1,943 ಮತ್ತು ಚೆನ್ನೈ ಪ್ರತಿ ಸಿಲಿಂಡರ್ ಗೆ ರೂ.1,999.50ಕ್ಕೆ ಏರಿಕೆ ಆಗಿದೆ.
ಅಕ್ಟೋಬರ್ ನಲ್ಲಿ ತೈಲ ಕಂಪನಿಗಳು 209 ರೂ.ಗಳಷ್ಟು ದರವನ್ನು ಹೆಚ್ಚಿಸಿದ್ದವು. ಆದರೆ ಗೃಹಬಳಕೆಯ ಎಲ್ಪಿಜಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ಗೆ 903 ರೂ., ಬೆಂಗಳೂರಿನಲ್ಲಿ 905 ರೂ. ಇದೆ ಎಂದು ಮಾಹಿತಿ ನೀಡಿದೆ.