ನ್ಯೂಸ್ ನಾಟೌಟ್ : ಬೇಟೆಗಾರನ ಮೇಲೆ ಅರಣ್ಯಾಧಿಕಾರಿ ಫೈರಿಂಗ್ ಮಾಡಿದ್ದು ಸ್ಥಳದಲ್ಲೇ ಬೇಟೆಗೆ ಬಂದಿದ್ದಾತ ಕೊನೆಯುಸಿರೆಳೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ರೇಂಜ್ ಬಳಿ ನಡೆದಿದೆ .
ಭೀಮನಬೀಡು ಗ್ರಾಮದ ನಿವಾಸಿ ಮನು (35) ಗುಂಡಿನ ದಾಳಿಗೆ ಬಲಿಯದಾ ಬೇಟೆಗಾರ ಎನ್ನಲಾಗಿದೆ. 10 ಬೇಟೆಗಾರರ ತಂಡ ತಡರಾತ್ರಿ ಜಿಂಕೆ ಬೇಟೆಯಾಡಲು ಮದ್ದೂರು ರೇಂಜ್ನ ಅರಣ್ಯದೊಳಗೆ ಪ್ರೇಶಿಸಿದ್ದಾರೆ.
ಈ 10 ಜನರ ಬೇಟೆಗಾರರಲ್ಲಿ ಐದಕ್ಕೂ ಹೆಚ್ಚು ಜನ ಬೇಟೆಗಾರರ ಬಳಿ ನಾಡ ಬಂದೂಕು ಇತ್ತು. ಇವರು ಅರಣ್ಯದೊಳಗೆ ಹೋಗಿ ನಾಲ್ಕಕ್ಕೂ ಅಧಿಕ ಕಡವೆ ಜಿಂಕೆಗಳನ್ನು ಕೊಂದು, ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.
ಗುಂಡಿನ ಸದ್ದು ಕೇಳಿ ಅಲರ್ಟ್ ಆಗಿದ್ದ ಫಾರೆಸ್ಟ್ ಗಾರ್ಡ್ಸ್ ಹಾಗೂ ನೈಟ್ ಬೀಟ್ನಲ್ಲಿದ್ದ ಡಿ.ಆರ್.ಎಫ್.ಓ ತಕ್ಷಣವೇ ವೆಪನ್ ಸಮೇತ ಕಾಡಿನೊಳಗೆ ತೆರಳಿದ್ದಾರೆ. ಅಲ್ಲಿ ಬೇಟೆಗಾರರನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿ ಏರ್ಫೈರ್ ಮಾಡಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರೆಡು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿ ದಾಳಿ ಮಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಹೊಡೆದ ಗುಂಡಿಗೆ ಬೇಟೆಗಾರ ಮನು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಮೃತ ಬೇಟೆಗಾರ ಮನು ಸಂಬಂಧಿಕರು ಆಗಮಿಸಿದ್ದಾರೆ ಎಂದು ವರದಿ ತಿಳಿಸಿದೆ.