ನ್ಯೂಸ್ ನಾಟೌಟ್ : ಬಾಹುಬಲಿ ಚಿತ್ರ ರಿಲೀಸ್ ಬಳಿಕ ಪ್ರಭಾಸ್ ಅವರು ಸಹನಟಿ ಅನುಷ್ಕಾ ಶೆಟ್ಟಿ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ ಹರಡಿತ್ತು.ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರ ಸಂಬಂಧದ ವದಂತಿಗಳು ಮುನ್ನೆಲೆಗೆ ಬಂದವು.
ಇದೀಗ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.ಆದರೆ ಇದು ವದಂತಿ ಅಲ್ಲ ಬದಲಾಗಿ ನಿಜವಾಗ್ಲೂ ಅವರಿಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.ಪ್ರಭಾಸ್ ಮತ್ತು ಅನುಷ್ಕಾ ಅವರ ಕುಟುಂಬಗಳು ಸಹ ಇದಕ್ಕೆ ಸಮ್ಮತಿ ನೀಡಿವೆ ಎನ್ನಲಾಗಿದೆ. ಪ್ರಭಾಸ್ ಜೊತೆ ಅನುಷ್ಕಾ ಮದುವೆಗೆ ಎರಡೂ ಕುಟುಂಬಗಳು ಸಹಮತ ಸೂಚಿಸಿವೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಎಲ್ಲಾ ಸಿದ್ಧತೆಗಳು ನಡಿತಿವೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಕುಟುಂಬಗಳು ತಮ್ಮ ಮಕ್ಕಳ ತಮ್ಮ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅವರ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಲು ಒಪ್ಪಿಗೆ ಇದ್ದು,ಆದಷ್ಟು ಬೇಗ ಮದುವೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರೂ ಸದ್ಯ ಮದುವೆಗೆ ಸಿದ್ಧರಿಲ್ಲ ಎಂಬ ವಿಚಾರ ಹೊರ ಬಿದ್ದಿದೆ.ಅವರು ಕೇವಲ ಸ್ನೇಹಿತರಾಗಿ ಸಂತೋಷವಾಗಿದ್ದಾರೆ ಎಂದು ಮತ್ತೆ ಕೆಲವು ವರದಿಗಳು ಹೇಳುತ್ತಿವೆ.
ಪ್ರಸ್ತುತ ಪ್ರಭಾಸ್ ಅವರು ಅನುಷ್ಕಾ ಜತೆ ಡೇಟಿಂಗ್ ಮಾಡುತ್ತಿಲ್ಲ. ಅವರು ತುಂಬಾ ಆತ್ಮೀಯ ಸ್ನೇಹಿತರು ಮತ್ತು ಅವರ ಕುಟುಂಬ ಸದಸ್ಯರು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರು ಸದ್ಯಕ್ಕೆ ಮದುವೆಗೆ ಸಿದ್ಧರಿಲ್ಲ. ಅದಕ್ಕಾಗಿ ಅವರು ಈ ಕ್ಷಣದಲ್ಲಿ ಆಪ್ತ ಸ್ನೇಹಿತರಾಗಿದ್ದಾರೆ ಎಂದು ಹೇಳಲಾಗಿದೆ.ಅದು ನಂತರ ಪ್ರೀತಿಯಾಗಿ ಬೆಳೆಯುತ್ತದೆಯೇ ಎಂದು ನಮಗೆ ಖಚಿತವಾಗಿಲ್ಲ ಎಂದು ಕೆಲವು ಮೂಲಗಳು ಹೇಳಿವೆ ಎಂದು ವರದಿಯಾಗಿದೆ ಎನ್ನಲಾಗಿದೆ.