ನ್ಯೂಸ್ ನಾಟೌಟ್: ಮದುವೆ ಸಮಾರಂಭ ಹಾಲ್ ಅಥವಾ ಮನೆಗಳಲ್ಲಿ ಶಾಮಿಯಾನ, ಅಲಂಕಾರದಿಂದ ಶೃಂಗಾರಗೊಂಡ ಮಂಟಪದಲ್ಲಿ ನಡೆಯುವುದನ್ನು ನೋಡಿರುತ್ತೇವೆ ಆದರೆ ಇಲ್ಲಿ ಮದುವೆ ಆಸ್ಪತ್ರೆಯೊಳಗೆ ನಡೆದ ಅಪರುಪದ ಘಟನೆ ವರದಿಯಾಗಿದೆ.
ಗಾಜಿಯಾಬಾದ್ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ವಿಶೇಷ ವಿವಾಹ ನೆರವೇರಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಜೋಡಿಯೊಂದರ ವಿವಾಹ ಅಂದುಕೊಂಡ ದಿನಕ್ಕೆ ನಡೆಯಬೇಕಿತ್ತು. ಆದರೆ ಮದುವೆ ಮುಹೂರ್ತದಲ್ಲಿ ತಾಳಿ ಕಟ್ಟಲು ದಿನಗಣನೆ ಇರುವಾಗ ವರನಿಗೆ ಅನಾರೋಗ್ಯ ಕಾಣಿಸಿಕೊಂಡಿತು ಎನ್ನಲಾಗಿದೆ. ಈ ಕಾರಣದಿಂದ ವರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗ ಅವರಿಗೆ ಡೆಂಗ್ಯೂ ಇರುವುದು ಗೊತ್ತಾಗಿದೆ. ಇದರಿಂದ ವರ ಆಸ್ಪತ್ರೆಯಲ್ಲಿ ದಾಖಲಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ನ.27 ರಂದು ವಿವಾಹ ನಡೆಯಬೇಕಿತ್ತು. ಆದರೆ ವರ ಆಸ್ಪತ್ರೆ ದಾಖಲಾಗಿದ್ದರಿಂದ ವಧು – ವರನ ಕುಟುಂಬಸ್ಥರು ನಿಗದಿಪಡಿಸಿದ ದಿನವೇ ವಿವಾಹ ಮಾಡಿಸುವ ಸಲುವಾಗಿ. ಅಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿ ಮಾಡಲು ಹೊರಟಿದ್ದಾರೆ ಮತ್ತು ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಎರಡು ದಿನದ ಬಳಿಕ ಎರಡೂ ಮನೆಯವರು ಆಸ್ಪತ್ರೆಯಲ್ಲಿ ಮಾತನಾಡಿಕೊಂಡು ವರ ದಾಖಲಾಗಿರುವ ಕೋಣೆಯನ್ನು ಮದುವೆ ಮಂಟಪದಂತೆ ಶೃಂಗಾರಿಸಿ, ವಧುವನ್ನು ಕರೆತಂದು ಕುಟುಂಬದವರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ನಿಗದಿಪಡಿಸಿದ ಮಹೂರ್ತದಲ್ಲೇ ವಿವಾಹ ಮಾಡಿಸಿದ್ದಾರೆ ಎನ್ನಲಾಗಿದೆ.