ನ್ಯೂಸ್ ನಾಟೌಟ್: ಇಡೀ ವಿಶ್ವವೇ ವಾಂಖೆಡೆಯತ್ತ ದೃಷ್ಟಿ ಹರಿಸಿದೆ. ವಿಶ್ವಕಪ್ ಸೆಮಿಫೈನಲ್ ಫೈಟ್ ನಲ್ಲಿ ಟೀಂ ಇಂಡಿಯಾ ಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಗೆಲುವು ಯಾರಿಗೆ ಅನ್ನೋದರ ಬಗ್ಗೆ ದೊಡ್ಡ ಲೆಕ್ಕಾಚಾರ ಶುರುವಾಗಿದೆ. ಈ ರಣಾಂಗಣದ ಯುದ್ಧದಲ್ಲಿ ಗೆಲ್ಲೋದು ಯಾರು..? ಯಾರಿಗೆ ತೆರೆಯುತ್ತೆ ಅದೃಷ್ಟದ ಬಾಗಿಲು ಅನ್ನೋದು ವಿಶೇಷ. ಇಡೀ ವಿಶ್ವ ಕ್ರಿಕೆಟ್ ಲೋಕ ಬೆರಗುಗಣ್ಣಿನಿಂದ ನೋಡೋಕೆ ಕಾಯುತ್ತಿರುವ ಮಹತ್ವದ ಸೆಣಸಾಟ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ವಿಶ್ವಕಪ್ ಮೆಗಾ ಟೂರ್ನಿಯ ಮೊದಲ ಸೆಮಿಸ್ ಕದನಕ್ಕೆ ಮಹಾ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್ ವಾಂಖೆಡೆ ಮೈದಾನದಲ್ಲಿಂದು ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗ್ತಿವೆ. ಉಭಯ ತಂಡಗಳು ಮೊದಲ ತಂಡವಾಗಿ ಫೈನಲ್ ಪ್ರವೇಶಿಸುವ ತವಕದಲ್ಲಿವೆ. ಇಡೀ ವಿಶ್ವದ ಕಣ್ಣು ಇಂಡೋ – ಕಿವೀಸ್ ಕಾಳಗದ ಮೇಲೆ ನೆಟ್ಟಿದೆ. ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಕೇವಲ ಸೆಮಿಫೈನಲ್ ಪಂದ್ಯವಾಗಿ ಮಾತ್ರ ಉಳಿದಿಲ್ಲ. ಇದು ಸೇಡಿನ ಸಮರವಾಗಿ ಬದಲಾಗಿದೆ. ರಣಾಂಗಣದಲ್ಲಿ ಬ್ಯಾಟ್ & ಬೌಲ್ ಅನ್ನೋ ವೆಪನ್ ಹಿಡಿದು ಯುದ್ಧ ಗೆಲ್ಲುವ ಉತ್ಸಾಹ ಟೀಮ್ ಇಂಡಿಯಾದ್ದಾಗಿದೆ. ಈ ಹಿಂದೆ ಕಿವೀಸ್ ಕ್ರಿಕೆಟರ್ಸ್ ಅಂದ್ರೆ ಒಂದು ವಿಶೇಷವಾದ ಗೌರವ, ಪ್ರೀತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಇತ್ತು. ಆದ್ರೆ 2019ರ ವಿಶ್ವಕಪ್ ವಿಶ್ವಕಪ್ ಸೆಮೀಸ್ ಸೋಲಿನ ಬಳಿಕ ಅದೆಲ್ಲಾ ಬದಲಾಗಿದೆ. ಹೀಗಾಗಿ ಇದೊಂದು ಸೇಡಿನ ಸಮರ. ಮೆಗಾ ಟೂರ್ನಿಯ ಲೀಗ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ ಸೋಲೆ ಕಂಡಿಲ್ಲ. ಆಡಿದ ಎಲ್ಲಾ ಪಂದ್ಯಗಳನ್ನೂ ಗೆದ್ದು, ಸೋಲಿಲ್ಲದ ಸರದಾರನಾಗಿ ಸೆಮಿಸ್ ಲಗ್ಗೆ ಇಟ್ಟಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಜಬರ್ದಸ್ತ್ ಪರ್ಫಾಮೆನ್ಸ್ ನೀಡಿದ ಆತ್ಮವಿಶ್ವಾಸ ಟೀಮ್ ಇಂಡಿಯಾದ್ದು. ವಿಶ್ವಕಪ್ ಟೂರ್ನಿಯ ಲೀಗ್ ಸ್ಟೇಜ್ನಲ್ಲಿ ರನ್ನರ್ಅಪ್ ನ್ಯೂಜಿಲೆಂಡ್ ಭರ್ಜರಿ ಆರಂಭವನ್ನೇ ಮಾಡ್ತು. ಆದ್ರೆ, ಮಧ್ಯದಲ್ಲಿ ಮುಗ್ಗರಿಸಿತು. ಆರಂಭದಲ್ಲಿ ಸತತ 4 ಪಂದ್ಯ ಗೆದ್ದ ಬ್ಲ್ಯಾಕ್ಕ್ಯಾಪ್ಸ್ ಪಡೆ, ನಂತರದಲ್ಲಿ ಸತತ 4 ಸೋಲಿಗೆ ಶರಣಾಯ್ತು. ಅಂತಿಮವಾಗಿ 9ನೇ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಏಕದಿನ ಮಾದರಿಯಲ್ಲಿ ಈವರೆಗೆ ನ್ಯೂಜಿಲೆಂಡ್ – ಟೀಮ್ ಇಂಡಿಯಾ 117 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟೀಮ್ ಇಂಡಿಯಾ 59 ಪಂದ್ಯಗಳಲ್ಲಿ ಗೆದ್ದಿದ್ರೆ, 50 ಪಂದ್ಯಗಳಲ್ಲಿ ಸೋಲುಂಡಿದೆ. 1 ಪಂದ್ಯ ಟೈನಲ್ಲಿ ಅಂತ್ಯ ಕಂಡಿದ್ರೆ, 7 ಪಂದ್ಯಗಳು ರದ್ದಾಗಿವೆ. ಒಟ್ಟಿನಲ್ಲಿ, ಇಂದಿನ ಸೇಡಿನ ಸಮರದಲ್ಲಿ ಯಾರು ಗೆಲ್ತಾರೆ ಅನ್ನೋದು ಸದ್ಯ ಎಲ್ಲರ ಕುತೂಹಲ ಹೆಚ್ಚಿಸಿದೆ
- +91 73497 60202
- [email protected]
- November 25, 2024 5:54 AM