ನ್ಯೂಸ್ ನಾಟೌಟ್ : ತಾಯಿ ಹೃದಯ ಅನ್ನೊದು ಇದೇ ಕಾರಣಕ್ಕೆ ಅನ್ಸುತ್ತೆ.ಪುಟ್ಟ ಕಂದಮ್ಮನ ತಾಯಿ ಉಸಿರಾಟದ ಸಮಸ್ಯೆಯಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆ ಮಗುವಿಗೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಎದೆ ಹಾಲುಣಿಸಿ ದೇವರಾಗಿದ್ದಾರೆ.ಇಂತಹ ಘಟನೆ ವರದಿಯಾಗಿದ್ದು, ಕೇರಳದ ಕೊಚ್ಚಿಯಲ್ಲಿ..!
ಹೌದು,ಈ ಮಹಾನ್ ತಾಯಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.ತಾಯಿಯೊಬ್ಬಳು ಪರೀಕ್ಷೆ ಬರೆಯುವ ವೇಳೆ ಪೊಲೀಸ್ ಪೇದೆಯೊಬ್ಬರು ಮಗುವನ್ನು ಹಿಡಿದುಕೊಂಡ ಘಟನೆ ಈ ಹಿಂದೆ ವರದಿಯಾಗಿದ್ದವು.ಆದರೆ ಈ ಘಟನೆ ಮಾತ್ರ ಕೊಂಚ ವಿಭಿನ್ನವೆಂಬಂತಿದೆ.ಬಿಹಾರ ಮೂಲದ ಮಗುವಿನ ತಾಯಿಯೊಬ್ಬರು ಗುರುವಾರ ಶಸ್ತ್ರಚಿಕಿತ್ಸೆಯ ನಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.ಹೀಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಶಿಶುವಿನ ಆರೈಕೆಗೆ ಮುಂದಾದ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರ ಈ ಉದಾತ್ತ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ಸೂಚಿಸಿದ್ದಾರೆ.ಶಸ್ತ್ರಚಿಕಿತ್ಸೆಯ ನಂತರ ಉಸಿರಾಟದ ತೊಂದರೆಯಿಂದಾಗಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ಕು ತಿಂಗಳ ಶಿಶು ಸೇರಿದಂತೆ ನಾಲ್ವರು ಮಕ್ಕಳಿಗೆ ಸಹಾಯದ ಅವಶ್ಯಕತೆ ಇದೆ ಎಂದು ಗುರುವಾರ ಪೊಲೀಸರಿಗೆ ತಿಳಿಸಲಾಗಿತ್ತ.ತಕ್ಷಣ ಆಸ್ಪತ್ರೆಗೆ ಆಗಮಿಸಿದ ವನಿತಾ ಠಾಣೆಯ ಪೊಲೀಸ್ ತಂಡ, ಮಕ್ಕಳನ್ನು ಠಾಣೆಗೆ ಸ್ಥಳಾಂತರಿಸಿದೆ.“ಪೊಲೀಸ್ ಅಧಿಕಾರಿಗಳು ಮಕ್ಕಳಿಗೆ ಆಹಾರವನ್ನು ಖರೀದಿಸಿದರು ಮತ್ತು ಇತ್ತೀಚೆಗೆ ಹೆರಿಗೆ ರಜೆಯಿಂದ ಕೆಲಸಕ್ಕೆ ಮರಳಿದ ಆರ್ಯ ಅವರು ನಾಲ್ಕು ತಿಂಗಳ ಮಗುವಿಗೆ ಎದೆ ಹಾಲುಣಿಸಿದರು. ನಂತರ ಮಕ್ಕಳನ್ನು ಕೊಚ್ಚಿಯ ಚೈಲ್ಡ್ ಕೇರ್ ಹೋಮ್ಗೆ ಸ್ಥಳಾಂತರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತಮ್ಮ ತಂದೆ ಜೈಲಿನಲ್ಲಿದ್ದಾರೆ. ನಾನು ಮತ್ತು ನನ್ನ ಒಡಹುಟ್ಟಿದವರು ಕ್ರಮವಾಗಿ ಐದು ಮತ್ತು ಮೂರು ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ, ತಾಯಿಯೊಂದಿಗೆ ಕೇರಳದಲ್ಲಿ ನೆಲೆಸಿದ್ದೇವೆ ಎಂದು 13 ವರ್ಷದ ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆಯ ಹಿರಿಯ ಪುತ್ರಿ ಪೊಲೀಸರಿಗೆ ತಿಳಿಸಿದ್ದಾರೆ.ಈಕೆ ಮಲಯಾಳಂ ಅನ್ನು ನಿರರ್ಗಳವಾಗಿ ಮಾತನಾಡುತ್ತಿದ್ದು,ಬಾಲಕಿಗೆ ಬಿಹಾರದಲ್ಲಿರುವ ತನ್ನ ಸ್ಥಳದ ಬಗ್ಗೆ ಗೊತ್ತಿಲ್ಲ ಎನ್ನುತ್ತಿದ್ದಾಳೆ. ಪೊಲೀಸರು ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಅವರ ಸಂಬಂಧಿಕರ ಪತ್ತೆಗೆ ಬಿಹಾರ ಪೊಲೀಸರ ನೆರವು ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.