ನ್ಯೂಸ್ ನಾಟೌಟ್ :ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ಮುಗಿದಿದೆ.ಆದರೆ ಭಾರತದ ಸೋಲಿನ ನೋವಿನಿಂದ ಹಲವರು ಇಂದಿಗೂ ಹೊರಬಂದಿಲ್ಲ.ಪಂದ್ಯದ ಸೋಲಿಗೆ ಕಾರಣವೇನು? ಎನ್ನುತ್ತಾ ಹಲವು ರೀತಿಯಲ್ಲಿ ವಿಶ್ಲೇಷಣೆಗಳ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನಗಳು ನಡಿತಿವೆ. ಈ ಮಧ್ಯೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅವರು ಧರಿಸಿದ್ದ ಡ್ರೆಸ್ ಬಗ್ಗೆ ಭಾರಿ ಚರ್ಚೆಗಳು ನಡಿತಿವೆ.ನೋಡೋದಕ್ಕೆ ಸಿಂಪಲ್ ಆಗಿ ಕಾಣುತ್ತಿರುವ ಈ ಡ್ರೆಸ್ಗೆ ಇಷ್ಟೊಂದು ಬೆಲೆ ಇದೆಯಾ ಎಂದು ಅಚ್ಚರಿ ಸೂಚಿಸುತ್ತಿದ್ದಾರೆ.
ಫೈನಲ್ಸ್ನಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ ಬಳಿಕ ಅವರ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟುಹಾಕಿತ್ತು.ಇಷ್ಟಾಗುತ್ತಿದ್ದಂತೆಯೇ ಕ್ಯಾಮೆರಾ ಕಣ್ಣು ಅನುಷ್ಕಾ ಶರ್ಮಾ ಅವರ ಮೇಲೆ ಸಹಜವಾಗಿ ಬಿದ್ದಿತ್ತು. ಆ ಸಮಯದಲ್ಲಿ ಎಲ್ಲರ ಕಣ್ಣು ಅವರ ಡ್ರೆಸ್ ಮೇಲೆ ಬಿದ್ದದ್ದಂತೂ ಸುಳ್ಳಲ್ಲ. ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ ಶರ್ಮ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರೂ ಈ ಬಟ್ಟೆಯ ರೇಟ್ ಎಷ್ಟು ಇರಬಹುದು ಎಂದು ಭಾರಿ ಚರ್ಚೆ ಮಾಡುತ್ತಿದ್ದರು.ಈ ಫೈನಲ್ ಮ್ಯಾಚ್ಗೂ ಮುನ್ನ ಸೆಮಿ ಫೈನಲ್ ಮ್ಯಾಚ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಕಣಕ್ಕೆ ಇಳಿದಿತ್ತು. ಆಗ ವಿರಾಟ್ ಕೊಹ್ಲಿ ಅವರು 117 ರನ್ ಗಳಿಸಿದ್ದರು. ಅತ್ತ ಅವರ ಭರ್ಜರಿ ಆಟದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇತ್ತ ಆಗಲೂ ಸ್ಟೇಡಿಯಂಗೆ ಬಂದಿದ್ದ ಅನುಷ್ಕಾ ಶರ್ಮಾರ ಬಟ್ಟೆಯ ಚರ್ಚೆ ಆಗುತ್ತಿತ್ತು. ಕೊನೆಗೂ ಅವರ ತೊಟ್ಟ ಬಟ್ಟೆಯ ಬೆಲೆ ರಿವೀಲ್ ಆಗಿ ಫ್ಯಾನ್ಸ್ ಹುಬ್ಬೇರಿಸಿದ್ದರು. ಬಿಳಿ ಬೇಸ್ ಶರ್ಟ್ ಮೇಲೆ ಡಾರ್ಕ್ ಹಸಿರು ಬಣ್ಣದ ಹೂವಿನ ಪ್ರಿಂಟ್ ಇತ್ತು.ಈ ಫ್ಲೋರಲ್ ಪ್ರಿಂಟ್ ಗಾತ್ರದ ಶರ್ಟ್ ಬೆಲೆ 19,500 ರೂಪಾಯಿ ಬೆಲೆ ಎಂದು ಕಂಡುಹಿಡಿದಿದ್ದರು ಅಭಿಮಾನಿಗಳು.ನೋಡಲು ತುಂಬಾ ಸಿಂಪಲ್ ಎಂದುಕೊಂಡಿದ್ದ ಈ ಡ್ರೆಸ್ಗೆ ಇಷ್ಟೆಲ್ಲಾ ಬೆಲೆನಾ ಎಂದುಕೊಂಡಿದ್ದರು.
ಸೆಮಿ ಫೈನಲ್ಗೇ ಇಷ್ಟು ದುಬಾರಿ ಬೆಲೆಯ ಡ್ರೆಸ್ ಹಾಕಿರುವಾಗ ಫೈನಲ್ಗೆ ಇನ್ನೂ ಬೆಲೆ ಬಾಳುವ ಡ್ರೆಸ್ ಹಾಕಬಹುದು ಎಂದೇ ಅನುಷ್ಕಾ ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ ಅವರು ಫೈನಲ್ನಲ್ಲಿ ಹಾಕಿರುವ ಡ್ರೆಸ್ ಬೆಲೆ 7,250. ಅನುಷ್ಕಾ ಧರಿಸಿರುವ ವಸ್ತ್ರವು ಸ್ವದೇಶಿ ಲೇಬಲ್ ನಿಕೋಬಾರ್ನಿಂದ ಬಂದಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಫ್ಯಾನ್ಸ್. ಸೆಮಿಫೈನಲ್ಗಿಂತಲೂ ದುಬಾರಿ ಬಟ್ಟೆ ಹಾಕಿದ್ದರೆ ಫೈನಲ್ ಪಂದ್ಯವನ್ನೂ ಭಾರತ ಗೆಲ್ಲುತ್ತಿತ್ತು ಎಂದು ಕೆಲವು ತರ್ಲೆಗಳು ಕಾಮೆಂಟ್ನಲ್ಲಿ ಹೇಳುತ್ತಿದ್ದಾರೆ.