ನ್ಯೂಸ್ ನಾಟೌಟ್: ಕಾರು ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ಕಾರಿನಲ್ಲಿದ್ದ ಮದ್ಯದ ಬಾಟ್ಲಿಗಳನ್ನು ಯುವಕರನ್ನು ಕಸಿದುಕೊಂಡು ಓಡಿದ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ.
ಬಿಹಾರದಲ್ಲಿ (Bihar) 2016 ರಿಂದ ಮದ್ಯ ಮಾರಾಟ ನಿಷೇಧವಾಗಿದೆ. ಹೀಗಾಗಿ ರಾಜ್ಯದ ಜನ ಆಲ್ಕೋಹಾಲ್ (Alcohol) ಎಲ್ಲಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.
ಯುವಕರು ಬಾಟ್ಲಿ ಹಿಡಿದುಕೊಂಡು ಓಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿದೇಶಿ ಮದ್ಯ ತುಂಬಿದ್ದ ಕಾರು ಮತ್ತು ಇನ್ನೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಕೂಡಲೇ ಸ್ಥಳೀಯ ನಿವಾಸಿಗಳು ಸಹಾಯ ಮಾಡುದ ಉದ್ದೇಶದಿಂದ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಕಾರಿನೊಳಗೆ ಮದ್ಯದ ಬಾಟ್ಲಿಗಳಿರುವುದನ್ನು ಗಮನಿಸಿ ಕೈಗೆ ಸಿಕ್ಕ ಬಾಟ್ಲಿಗಳೊಂದಿಗೆ ಓಡಿದ್ದಾರೆ.
ಇಬ್ಬರು ಬಾಟ್ಲಿಗಳನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಉಳಿದ ಮಂದಿಯೂ ಕೈಗೆ ಸಿಕ್ಕ ಬಾಟ್ಲಿಗಳನ್ನು ಹಿಡಿದುಕೊಂಡು ಓಡಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳದಲ್ಲಿದ್ದವರೊಬ್ಬರು ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಯ ಮಾಹಿತಿ ಅರಿತ ದೋಭಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡಸಿದ್ದಾರೆ. ಪೊಲೀಸರು ಬಂದಿದ್ದನ್ನು ಲೆಕ್ಕಿಸದೇ ಜನ ಮದ್ಯದ ಬಾಟ್ಲಿಗಳಿಗಾಗಿ ಜನ ಮುಗಿಬಿದ್ದಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆಯ ಸಹಾಯಕ ಕಮಿಷನರ್ ಪ್ರೇಮ್ ಪ್ರಕಾಶ್ ಮಾತನಾಡಿ, ವೀಡಿಯೋದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.