ನ್ಯೂಸ್ ನಾಟೌಟ್ : ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ ಎಲ್ಐಸಿಯ 2ನೇ ತ್ರೈಮಾಸಿಕ ಫಲಿತಾಂಶ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಹೌದು, ಕಂಪನಿಯ ಲಾಭದಲ್ಲಿ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾರಿ ಹೆಸರು ಪಡೆದಿದ್ದ ಎಲ್ಐಸಿಯ ನಿವ್ವಳ ಲಾಭ ಅರ್ಧದಷ್ಟು ಕಡಿಮೆಯಾಗಿದ್ದು,ಕಂಪನಿಯ ಆದಾಯದಲ್ಲೂ ಕೂಡ ಭಾರೀ ವ್ಯತ್ಯಾಸಗಳಾಗಿವೆ ಎನ್ನಲಾಗಿದೆ. ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಶೇ.50ರಷ್ಟು ಕುಸಿದಿದ್ದು, ಇದರೊಂದಿಗೆ ಕಂಪನಿಯ ಲಾಭ ಈಗ 8,000 ಕೋಟಿ ರೂ.ಗಿಂತ ಕಡಿಮೆಯಾಗಿದೆ. ಕಂಪನಿ ನೀಡಿರುವ ಮಾಹಿತಿಯಲ್ಲಿ ಎಲ್ಐಸಿ ನಿವ್ವಳ ಲಾಭದಲ್ಲಿ ಶೇ.50ರಷ್ಟು ಇಳಿಕೆ ಕಂಡು 7,925 ಕೋಟಿ ರೂ.ಗೆ ತಲುಪಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ವಿಮಾ ಕಂಪನಿಯ ನಿವ್ವಳ ಲಾಭ 15,952 ಕೋಟಿ ರೂ. ಆಗಿತ್ತು ಅನ್ನುವ ವಿಚಾರ ಕೇಳಿ ಬಂದಿತ್ತು.
ಭಾರತೀಯ ಜೀವ ವಿಮಾ ನಿಗಮ (LIC) ಮೂಲಕ ಜನರಿಗೆ ಜೀವ ವಿಮೆಯನ್ನು ಒದಗಿಸುವ ಕಂಪನಿ LICಯು ಜೀವ ವಿಮೆಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಹೊಂದಿದೆ. ಇದಲ್ಲದೆ ಎಲ್ಐಸಿ ಆರೋಗ್ಯ ವಿಮಾ ಯೋಜನೆಗಳನ್ನು ಸಹ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಯ ಲಾಭದಲ್ಲಿನ ಕುಸಿತವು ಸಾಕಷ್ಟು ಆತಂಕಕಾರಿಯಾಗಿದೆ. ಎಲ್ಐಸಿಯ ನಿವ್ವಳ ಪ್ರೀಮಿಯಂ ಆದಾಯದಲ್ಲೂ ಇಳಿಕೆಯಾಗಿದೆ ಅನ್ನೊದು ಆಘಾತಕಾರಿ ಅಂಶ.