ನ್ಯೂಸ್ ನಾಟೌಟ್ : ನಾಯಿಗಿರುವ ನಿಯತ್ತು ಮನುಷ್ಯರಿಗಿರಲ್ಲ.ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ಮನೆ ಯಜಮಾನನಿಗೆ ಎಂದಿಗೂ ದ್ರೋಹ ಬಗೆಯದ ಪ್ರಾಣಿ ಅಂದ್ರೆ ಅದು ಶ್ವಾನ.ಅಪ್ಪಿ ತಪ್ಪಿ ಮಿಸ್ ಆಗಿ ವರ್ಷ ಕಳೆದರೂ ಗುರುತು ಹಿಡಿಯಬಲ್ಲ ಈ ಮೂಕ ಪ್ರಾಣಿ ಕಥೆ ಬಗ್ಗೆ ನೀವೆಲ್ಲಾ ಕೇಳಿದ್ದೀರಿ.. ಆದರೆ ಈ ಮೂಕ ಪ್ರಾಣಿ ಈಗ ತನ್ನಿಂದ ಆದ ತಪ್ಪಿಗೆ ಮರುಕ ಪಟ್ಟಿದೆ ಅಂದ್ರೆ ನೀವು ನಂಬಲೇ ಬೇಕಾದ ವಿಚಾರ..!
ಹೌದು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಈ ವಿಸ್ಮಯಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್ಗೆ ನಾಯಿ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಉಸಿರು ಚೆಲ್ಲಿದ್ದ ಘಟನೆಯೊಂದು ವರದಿಯಾಗಿತ್ತು. ಬೈಕಿಗೆ ಅಡ್ಡ ಬಂದಿದ್ದ ನಾಯಿ ಆತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದೆ.ಮನುಷ್ಯ ತಪ್ಪು ಮಾಡಿದ್ರೆ ಎಲ್ಲಾದರೂ ಹೋಗಿ ತಪ್ಪಿಸಿಕೊಳ್ಳುತ್ತಾನೆ. ಆದರೆ ನಾಯಿ ಆ ಮನೆಯನ್ನು ಹುಡುಕಿಕೊಂಡು ಬಂದು ತನ್ನ ತಪ್ಪಿನ ಅರಿವಾಗಿ ಕುಟುಂಬಸ್ಥರನ್ನು ಸಂತೈಸಿದೆ. ತಿಪ್ಪೇಶ್ (21) ದುರಂತ ಅಂತ್ಯ ಕಂಡ ಯುವಕನಾಗಿದ್ದು, ಕಳೆದ ಗುರುವಾರ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ. ಈ ವೇಳೆ ಬಿಟ್ಟು ವಾಪಸ್ಸು ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ ನಡೆಯಿತು. ಅಪಘಾತದಲ್ಲಿ ತಿಪ್ಪೇಶ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದ. ಆದರೆ ಘಟನೆ ನಡೆದು ಮೂರನೇ ದಿನಕ್ಕೆ ಆತನ ಮನೆಗೆ ಅದೇ ನಾಯಿ ಆಗಮಿಸಿದೆ. ಮನೆಗೆ ಬಂದು ತಿಪ್ಪೇಶ್ ಕೊಠಡಿ, ಅಡುಗೆ ಮನೆಯನ್ನು ಸುತ್ತಾಡಿದ ನಾಯಿ. ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡಿದೆ..! ನಾಯಿ ಸುತ್ತಾಡುವುದನ್ನು ನೋಡಿ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಇದರ ಸತ್ಯಾಸತ್ಯಾತೆ ಬಗ್ಗೆ ತಿಳಿದುಬಂದಿಲ್ಲ. ವಿಡಿಯೋದಲ್ಲಿ ಈ ಬಗ್ಗೆ ಉಲ್ಲೇಖವಿದೆ.ನಮ್ಮ ದೇಶದಲ್ಲಿ ನಾಯಿಗೂ ವಿಶೇಷ ಸ್ಥಾನವನ್ನೇ ನೀಡಿದ್ದೇವೆ. ಕೇರಳದಲ್ಲಿ ಪ್ರಸಿದ್ಧ ದೈವಸ್ಥಾನವಿದೆ. ಇನ್ನು ಹಿಂದೂ ದೇವತೆಗಳಲ್ಲಿ ಬೈರವ ದೇವನಿಗೆ ಶ್ವಾನ ವಾಹನವಾಗಿದೆ.ಅಂತು ಈ ಘಟನೆ ನೋಡಿ ಎಲ್ಲರ ಕಣ್ಣಂಚಲ್ಲಿ ನೀರು ಸುರಿದಿದೆ.ಶ್ವಾನ ತಿಳಿಯದೇ ಮಾಡಿದ ತಪ್ಪಿದು,ಒಟ್ಟಿನಲ್ಲಿ ವಿಧಿಲೀಲೆ ಎಂಬಂತೆ ಈ ಅವಘಡ ಸಂಭವಿಸಿದೆ.