ನ್ಯೂಸ್ ನಾಟೌಟ್: ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಫೈಟ್ ಜೋರಾಗಿದೆ.ಹೀಗಾಗಿ ಬಿಗ್ ಬಾಸ್ ವೀಕ್ಷಕರಿಗೆ ಜೋಶ್ ಆರಂಭವಾಗಿದೆ. ವಿನಯ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತೋಷ್ ಸೇರಿದಂತೆ ಹಲವು ಮಂದಿ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ.
ಈಗೀಗ ವಿನಯ್ ಕೂಡ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಂಡಿದ್ದು,ಈ ಹಿನ್ನೆಲೆಯಲ್ಲೇ ಕಿಚ್ಚ ಸುದೀಪ್ ಕೂಡ ವಿನಯ್ ಬಗ್ಗೆ ಮಾತಾಡಿದ್ದರು.ವಿನಯ್ ಅವರ ಕೆಲವೊಂದು ನಡತೆ ಜನತೆಯ ಮನಸ್ಸಿಗೆ ಅಸಮಾಧಾನವನ್ನು ಉಂಟು ಮಾಡಿದ್ದವು.ಬಿಗ್ಬಾಸ್ ಮನೆಯೊಳಗೆ ವಿನಯ್ ಏರು ಧ್ವನಿಯಲ್ಲಿ ಮಾತಾಡುತ್ತಾ ಡಾಮಿನೇಟ್ ಮಾಡುತ್ತಿದ್ದಾರೆಂದು ಆರೋಪಗಳು ಕೇಳಿ ಬಂದಿದ್ದವು.ಈ ಬಗ್ಗೆ ಹಲವು ಸ್ಪರ್ಧಿಗಳು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಸದ್ಯ ವೀಕ್ಷಕರು ಸಹ ವಿನಯ್ ನಡುವಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ. ಆದ್ರೀಗ ಬಿಗ್ ಬಾಸ್ನಲ್ಲಿ ವಿನಯನನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಅವರ ಪತ್ನಿ ಅಕ್ಷತಾ ವಿನಯ್ ಕಣ್ಣೀರು ಸುರಿಸಿರುವ ಘಟನೆ ವರದಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರನ್ನು ಬಿಂಬಿಸುತ್ತಿರುವ ರೀತಿ ಸರಿಯಿಲ್ಲ ಎಂದು ಕಣ್ಣೀರಿಟ್ಟ ಅಕ್ಷತಾ ವಿನಯ್ ಒಂದು ಸಂದರ್ಶನದಲ್ಲಿ “ವಿನಯ್ ಬಿಗ್ ಬಾಸ್ ಮನೆಗೆ ಹೋಗಿದ್ದು ಖುಷಿಯಿದೆ. ಆದರೆ, ಅವರನ್ನು ತೋರಿಸುತ್ತಿರೋದು ಖುಷಿಯಿಲ್ಲ. ಅವರನ್ನು ಬಿಂಬಿಸುತ್ತಿರುವ ರೀತಿ ನನಗೆ ಸಮಾಧಾನ ತಂದಿಲ್ಲ. ಯಾಕೆ ಆ ರೀತಿ ಮಾಡುತ್ತಿದ್ದಾರೆ ಅನ್ನೋ ಬಗ್ಗೆ ನನಗೆ ತುಂಬಾನೇ ಬೇಜಾರಿದೆ. ಅವರೆಲ್ಲರನ್ನು ನೋಡಿದರೆ ವಿನಯ್ ಮಾತ್ರ ಡಿಫ್ರೆಂಟ್ ಆಗಿದ್ದಾರೆ ಅಂತ ಅನಿಸುತ್ತಾರೆ. ಮನೆಯೊಳಗೆ ಎಲ್ಲರೊಂದಿಗೂ ಫ್ರೆಂಡ್ಲಿಯಾಗಿದ್ದಾರೆ. ಆ ಬಗ್ಗೆ ಖುಷಿಯಾಗಿದೆ. ಆದರೆ, ಯಾಕೆ ಹೀಗೆ ಬಿಂಬಿಸುತ್ತಿದ್ದಾರೆ ಅಂತ ಬೇಜಾರಿದೆ.” ಎಂದು ಅಕ್ಷತಾ ವಿನಯ್ ಆರೋಪಿಸಿದ್ದಾರೆ.
ಅಕ್ಷತಾ ವಿನಯ್ ಬಗ್ಗೆ ಮಾತನಾಡುತ್ತಾ “ಅವರ ಒಳ್ಳೆತನವನ್ನು ಹೈಲೈಟ್ ಮಾಡುತ್ತಿಲ್ಲ. ತಮಾಷೆಗೆ ಹೇಳಿರುವುದನ್ನೂ ಸೀರಿಯಸ್ ಆಗಿ ತೆಗೆದುಕೊಂಡು ಅದನ್ನೇ ಪ್ರೋಮೊ ಮಾಡಿ ಹಾಕುತ್ತಿದ್ದಾರೆ. ಅದ್ಯಾಕೆ ಅಂತ ಕೇಳೋಣ ಅಂತ ಚಾನೆಲ್ಗೆ ಬಹಳಷ್ಟು ಬಾರಿ ಫೋನ್ ಮಾಡಿದೆ. ಆದರೆ, ಅವರು ಫೋನ್ ಎತ್ತುತ್ತಿಲ್ಲವೆಂದು ಗೋಳಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ವಿನಯ್ ಅವರನ್ನು ನೆಗೆಟೀವಾಗಿ ತೋರಿಸಲಾಗುತ್ತಿದೆ. “ಎರಡು ವಾರ ಕಾದೆ ನಾನು.. ಮೂರನೇ ವಾರನೂ ಕಂಟಿನ್ಯೂ ಆಯ್ತು. ನಾಲ್ಕನೇ ವಾರ ಇನ್ನೂ ಹೆಚ್ಚಾಯ್ತು. ವಿನಯ್ ವಿನಯ್ ಅಂತಲೇ ಪ್ರೋಮೋ ಬಿಡುತ್ತಿದ್ದಾರೆ ಹೊರತು, ಅಲ್ಲಿ ವಿನಯ್ ಬಗ್ಗೆ ಇವತ್ತಿನವರೆಗೂ ಒಳ್ಳೆಯದನ್ನು ತೋರಿಸಿಲ್ಲ. ವಿನಯ್ ಈ ರೀತಿ ತೋರಿಸೋ ಉದ್ದೇಶವಿರಲಿಲ್ಲ. ಆದರೂ ಯಾಕೆ ಹೀಗೆ ತೋರಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಕಣ್ಣೀರಾದರು.
ನನಗೆ ಅವರನ್ನು ಹಾಗೇ ನೋಡುವುದಕ್ಕೆ ಆಗುತ್ತಿಲ್ಲ.ನನ್ನಿಂದ ಇದನ್ನು ಸಹಿಸಲಾಗುತ್ತಿಲ್ಲ. ಅಂತಹ ವ್ಯಕ್ತಿ ಅಲ್ಲ ಅವರು. ತುಂಬಾನೇ ಕಷ್ಟ ಪಟ್ಟು ಮೇಲೆ ಬಂದಿದ್ದಾರೆ. ಮೋಸ ಮಾಡಿ ಆಗಲಿ. ಇನ್ನೊಂದು ಮಾಡಿ ಮೇಲೆ ಬಂದಿಲ್ಲ. ಒಂದೊಂದು ಕೆಲಸನೂ ದೇವರಂತೆ ನೋಡಿ ಮೇಲೆ ಬಂದಿದ್ದಾರೆ. ಅಲ್ಲಿ ಅವರಿಗೆ ಮರ್ಯಾದೇನೆ ಇಲ್ಲ ಅನ್ನೋ ಹಾಗೆ ಮಾಡಿದ್ದಾರೆ” ಎಂದು ಬೇಸರ ಹೊರ ಹಾಕಿದ್ದಾರೆ.