ನ್ಯೂಸ್ ನಾಟೌಟ್: ಜಗತ್ತಿನ ಪಂಚಮವೇದ ಎಂದೇ ಕರೆಯಲ್ಪಡುವ ಹೀಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು (Bhagavad Gita) ಇತಿಹಾಸದುದ್ದಕ್ಕೂ ವಿವಿಧ ವ್ಯಾಖ್ಯಾನಗಳು ಮತ್ತು ವಿಶ್ಲೇಷಣೆಗಳಿಗೂ ಇದು ಒಳಪಟ್ಟಿದೆ.
ಆದರೆ ಇತ್ತೀಚೆಗೆ ಪ್ರಸಿದ್ಧ ಸ್ಲೋವೇನಿಯನ್ ತತ್ವಜ್ಞಾನಿ (Philosopher) ಸ್ಲಾವೊಜ್ ಜಿಜೆಕ್ (Slavoj Zizek) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಆತನ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಜಿಜೆಕ್ ಭಗವದ್ಗೀತೆಯನ್ನು ಹರಿದು ಹಾಕಿದ್ದು ಮಾತ್ರವಲ್ಲದೇ ಅದು ಅತ್ಯಂತ ಕೆಟ್ಟದ್ದು ಎಂಬ ರೀತಿಯ ಪದ ಬಳಕೆ ಮಾಡಿ ಭಗವದ್ಗೀತೆಯ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ.
ಮಾತ್ರವಲ್ಲದೇ ಜರ್ಮನಿಯ ನಾಝಿ ರಾಜಕಾರಣಿ ಹೆನ್ರಿಕ್ ಹಿಮ್ಲರ್ ಯಹೂದಿಗಳ ಮೇಲಿನ ನರ* ಮೇಧವನ್ನು ಸಮರ್ಥಿಸಿಕೊಳ್ಳಲು ಭಗವದ್ಗೀತೆಯನ್ನು ಬಳಸಿದ್ದಾಗಿ ತತ್ವಜ್ಞಾನಿ ಹೇಳಿದ್ದಾರೆ. ಜಿಜೆಕ್ ಅವರ ಈ ಹೇಳಿಕೆ ಕಳೆದ ಕೆಲ ದಿನಗಳ ಹಿಂದೆ ಭಾರೀ ವಿವಾದಕ್ಕೆ ಕಾರಣವಾದ ಒಪ್ಪೆನ್ಹೈಮರ್ (Oppenheimer) ಚಿತ್ರದಲ್ಲಿನ ದೃಶ್ಯಕ್ಕೆ ನೀಡಿದ ವಿವರಣೆಯಾಗಿದೆ.
ಈ ಚಿತ್ರದಲ್ಲಿ ಪಾತ್ರಧಾರಿಗಳು ಭಗವದ್ಗೀತೆಯನ್ನು ಓದುವ ಸಂದರ್ಭ ದೈಹಿಕ ಸಂಪರ್ಕ ಕ್ರಿಯೆಯಲ್ಲಿ ತೊಡಗುವುದನ್ನು ತೋರಿಸಲಾಗಿದೆ. ಇದನ್ನು ವಿರೋಧಾಭಾಸವೆಂದು ವಿವರಿಸಿದ ಅವರು,ಕೆಟ್ಟ ಪಠ್ಯದಿಂದ ಆಯ್ದ ಭಾಗಗಳ ಜೊತೆ ಸುಂದರವಾದ ಲೈಂ* ಗಿಕ ಕ್ರಿಯೆಯನ್ನು ಚಿತ್ರಿಸಿದ್ದಾಗಿ ಹೇಳಿದ್ದಾರೆ.
ಒಪ್ಪೆನ್ಹೈಮರ್ ಒಂದು ಉತ್ತಮ ಚಿತ್ರವಾಗಿದೆ. ಆದರೆ ನಾನು ಭಗವದ್ಗೀತೆಯ ಆಧ್ಯಾತ್ಮಿಕ ಭಾಗವನ್ನು ದ್ವೇಷಿಸುತ್ತೇನೆ ಎಂದು ಜಿಜೆಕ್ ಎಕ್ಸ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.