ನ್ಯೂಸ್ ನಾಟೌಟ್ :ಕೊಡಗಿನಲ್ಲಿ ಪುರಾತನ ಕಾಲದ ಚಿನ್ನಾಭರಣವುಳ್ಳ ನಿಧಿ ಪತ್ತೆಯಾಗಿದೆ. ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಪ್ರಾಚಿನ ಕಾಲದ ಕೆಲ ವಸ್ತುಗಳು ಪತ್ತೆಯಾಗಿರುವ ಸುದ್ದಿ ಭಾರಿ ವೈರಲ್ ಆಗಿದೆ.
ಕೊಡಗು ಜಿಲ್ಲೆಯ ಸಿದ್ದಾಪುರದ ಅಮ್ಮತಿ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಆನಂದಪುರ ಗ್ರಾಮದಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನಕಾಲದ ಈಶ್ವರ ದೇವಸ್ಥಾನವಿದೆ.ಇಲ್ಲಿ ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಪ್ರಾಚಿನ ಕಾಲದ ಕೆಲ ವಸ್ತುಗಳು ಪತ್ತೆಯಾಗಿದ್ದಾವೆಂದು ತಿಳಿದು ಬಂದಿದೆ.
ಪತ್ತೆಯಾದ ವಸ್ತುಗಳ ಒಳಗೆ ಪರಿಶೀಲನೆ ನಡೆಸಿದಾಗ ಅಲ್ಲಿನ ಗ್ರಾಮಸ್ಥರೇ ಆಶ್ಚರ್ಯಕ್ಕೊಳಗಾಗಿದ್ದಾರೆ. ಚಿನ್ನದ ಆಭರಣ ಸೇರಿದಂತೆ , ಹಳೆಯ ಕಾಲದ ಉಂಗುರ, ಖಡ್ಗ ಹಾಗೂ ಪುರಾತನ ಕಾಲದ ಆಭರಣಗಳು ಪತ್ತೆಯಾಗಿವೆಂದು ತಿಳಿದು ಬಂದಿದೆ. ಈ ಅಚ್ಚರಿಯ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿನ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.ಮಾತ್ರವಲ್ಲ ಸಿದ್ದಾಪುರ ಪೊಲೀಸರಿಗೂ ಮಾಹಿತಿ ನೀಡಲಾಯಿತು.ಬಳಿಕ ತಹಶೀಲ್ದಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೀಗ ಪತ್ತೆಯಾದ ಆಭರಣಗಳನ್ನು ವಿರಾಜಪೇಟೆ ತಹಶೀಲ್ದಾರ್ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.ಇದಾದ ಬಳಿಕ ಸಂಶೋಧನೆ ನಡೆಸಲೆಂದು ಪ್ರಾಚ್ಯವಸ್ತು ಇಲಾಖೆಗೆ ನೀಡಲಾಗಿದೆ.ಇದು ಎಷ್ಟು ವರ್ಷಗಳ ಹಿಂದಿನ ಆಭರಣಗಳೆಂಬುದು ಇನ್ನಷ್ಟೇ ಬೆಳಕಿಗೆ ಬರಲಿದ್ದು,ಸಂಶೋಧನೆ ಬಳಿಕವಷ್ಟೇ ಇದರ ಮಾಹಿತಿ ತಿಳಿದು ಬರಬೇಕಾಗಿದೆ.