ನ್ಯೂಸ್ ನಾಟೌಟ್ : ಮೊಸಳೆಯನ್ನು ಕಂಡ್ರೆ ಸಾಕು ಅನೇಕರಿಗೆ ಮೈ ನಡುಕವೇ ಶುರುವಾಗುತ್ತದೆ. ಅದು ಬಾಯಿ ತೆರೆದರಂತೂ ಮುಗಿದೇ ಹೋಯಿತು.ಇನ್ನು ಮೈಮೇಲೆ ಬಿದ್ದರೆ!? ಹೇಗಿರಬೇಡ..!
ಇಲ್ಲೊಂದು ಮೊಸಳೆ ವ್ಯಕ್ತಿಯೊಬ್ಬನ ಮೇಲೇರಿ ಅವನನ್ನು ಮುದ್ದು (Cuddle) ಮಾಡಲು ಶುರು ಮಾಡಿದೆ. ಸರೀಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಕತ್ ಮಜಾ ನೀಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಅಬ್ಬಾ ಇದು ನಿಜನಾ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿಯ ಬದಲಾಗಿ ನಾನು ಅದರೊಂದಿಗೆ ಇರಬಾರದಿತ್ತೆ? ಎಂದು ಕೇಳಿದ್ದಾರೆ.
ಸದ್ಯ ಈ ವಿಡಿಯೋ ಭಯಂಕರ ವೈರಲಾಗುತ್ತಿದೆ.3.4 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 14,000 ಜನರು ಈ ವಿಡಿಯೋ ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಬ್ರೂವರ್ನ ಧೈರ್ಯವನ್ನು ಶ್ಲಾಘಿಸಿದ್ದಾರೆ.
https://www.instagram.com/p/CzOcb_Mr2KE/?utm_source=ig_embed&utm_campaign=embed_video_watch_again
https://www.instagram.com/p/CzOcb_Mr2KE/?utm_source=ig_embed&utm_campaign=embed_video_watch_again
ಎಂಥ ಮುದ್ದಾಗಿದೆ ಈ ದೃಶ್ಯ ಎಂದಿದ್ದಾರೆ ಇನ್ನೊಬ್ಬರು. ಅವನ ಬಾಯಿಗೆ ಟೇಪ್ ಹಾಕಿ ಒಳ್ಳೆಯದು ಮಾಡಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ಮಗ ಅಪ್ಪನನ್ನು ಪ್ರೀತಿಸುವ ಪರಿ ಎಂದಿದ್ದಾರೆ ಒಬ್ಬರು. ಬಾಯಿಗೆ ಅಂಟಿಸಿದ ಟೇಪ್ ತೆಗೆದು ಮುದ್ದಾಡಿಸಿಕೊಂಡು ನೋಡಿ ಒಮ್ಮೆ ಎಂದಿದ್ದಾರೆ ಇನ್ನೊಬ್ಬರು. ಟೇಪ್ ತೆಗೆದು ಮುದ್ದಾಡಿಸಿಕೊಂಡ ಮೇಲೆ ಹೀಗೆಯೇ ನಗುತ್ತಲೇ ಇರುವಿರೋ ಎಂದಿದ್ದಾರೆ ಮತ್ತೊಬ್ಬರು.