ನ್ಯೂಸ್ ನಾಟೌಟ್ :ನಿನ್ನೆ (ನವೆಂಬರ್ 02ರಂದು) ರಾತ್ರಿ ಸುಮಾರು 9.30 ರಿಂದ ಸುಳ್ಯ ಭಾಗದಲ್ಲಿ ಭಾರಿ ಮಳೆ ಸುರಿದಿದ್ದು,ಗುಡುಗು ಸಿಡಿಲುಗಳ ಅಬ್ಬರ ಜೋರಾಗಿತ್ತು.ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಭಾರಿ ತೊಂದರೆ ಅನುಭವಿಸಿರುವ ಘಟನೆ ವರದಿಯಾಗಿದೆ.
ಇದರ ಮಧ್ಯೆ ಓರ್ವ ಬೈಕ್ ಸವಾರ ಪೈಚಾರ್ ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಎನ್ನಲಾಗಿದೆ.ಸುಳ್ಯದ ಶ್ರೀ ರಾಂ ಪೇಟೆ ತಲುಪುತ್ತಿದ್ದಂತೆ ಧಾರಾಕಾರ ಮಳೆ ಸುರಿಯುತ್ತಿದ್ದರ ಪರಿಣಾಮ ಬೈಕ್ ನಿಯಂತ್ರಣಕ್ಕೆ ಬಾರದೇ ಸ್ಕಿಡ್ ಆಗಿದ್ದು,ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ನಡುರಸ್ತೆಗೆ ಎಸೆಯಲ್ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಕಾರು ಚಾಲಕ ಹಾಗೂ ಬೈಕ್ ಸವಾರನ ನಡುವೆ ವಾಗ್ವಾದ ನಡೆದಿದೆ.ಬೈಕ್ ಸವಾರ ತನ್ನ ಬೈಕ್ ಕಾರಿಗೆ ಡಿಕ್ಕಿ ಹೊಡೆದಿಲ್ಲ ಎಂದಿದ್ದು,ಕಾರನ್ನು ಪರಿಶೀಲಿಸಿದಾಗ ಕಾರಿಗೆ ಹಾನಿಯಾಗಿತ್ತು ಎನ್ನಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.ಭಾರಿ ಮಳೆಗೆ ವಾಹನ ಸವಾರರು ಕೆಲಕಾಲ ಪರದಾಟ ನಡೆಸಿದ ಪ್ರಸಂಗವೂ ನಡೆಯಿತು.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ಕಾರಣ ಕೆಲ ಸಮಯದಲ್ಲಿ ಪರಿಸ್ಥಿತಿ ಶಾಂತವಾಯಿತು ಎಂದು ತಿಳಿದು ಬಂದಿದೆ.ಸದ್ಯ ಬೈಕ್ ಸವಾರನಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.