ನ್ಯೂಸ್ ನಾಟೌಟ್:ಸ್ವಿಗ್ಗಿ , ಜೋಮ್ಯಾಟೋದಂತಹ ಫುಡ್ ಡೆಲಿವರಿ ವ್ಯವಸ್ಥೆಗಳು ಬಂದ ಬಳಿಕ ಹೆಚ್ಚಿನವರು ಅದರಲ್ಲೇ ಆರ್ಡರ್ ಮಾಡೋದೇ ಹೆಚ್ಚು.ಇಷ್ಟು ಸಮಯ ಹೆಚ್ಚಾಗಿ ಹುಡುಗರೇ ಈ ಡೆಲಿವರಿ ಕೆಲಸ ಮಾಡುತ್ತಿದ್ದರು.ಆದರೆ ಫುಡ್ ಡೆಲಿವರಿ ಮಾಡಿದಾಗ ಸ್ಟೈಲಿಶ್ ಬೈಕ್ನಲ್ಲಿ ಚಂದದ ಯುವತಿಯೊಬ್ಬಳು ಫುಡ್ನ್ನು ತಂದುಕೊಟ್ಟರೆ ಹೇಗಿರಬಹುದು?ಎಂದು ಕನಸು ಕಾಣುವವರಿದ್ದರೆ, ಅವರು ಈ ವಿಡಿಯೋ ವೀಕ್ಷಣೆ ಮಾಡಿದ್ರೆ ಅದು ನನಸಾದಂತೆಯೇ ಎನಿಸಬಹುದು.
ಹೌದು, ಇಲ್ಲೊಂದು ಕಡೆ ವಿಡಿಯೋದಲ್ಲಿ ಚಂದದ ಹುಡುಗಿಯೊಬ್ಬಳು, ಚಂದದ ಬೈಕಿನಲ್ಲಿ ಜೊಮ್ಯಾಟೊ ಫುಡ್ ಡೆಲಿವರಿ ಬ್ಯಾಗ್ ಹಾಕಿಕೊಂಡು ರಸ್ತೆಗಿಳಿದಿದ್ದಾಳೆ.ಇಲ್ಲಿ ಜೊಮ್ಯಾಟೊ ಬ್ಯಾಗ್ಗಿಂತ ಆಕೆಯ ಸೌಂದರ್ಯವೇ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ.ಇನ್ನು ರಸ್ತೆಯಲ್ಲಿ ಓಡಾಡುತ್ತಿರುವ ವೇಳೆ ಸುತ್ತ ಮುತ್ತ ಇತರ ವಾಹನ ಸವಾರರ ದೃಷ್ಟಿ ಕೂಡ ಒಮ್ಮೆ ಈಕೆಯತ್ತ ಹಾದು ಹೋಗದೇ ಇರಲು ಸಾಧ್ಯವಿಲ್ಲ.ಇಂತಹ ದೃಶ್ಯ ಕಂಡು ಬಂದಿದ್ದು, ಮಧ್ಯಪ್ರದೇಶದ ಇಂದೋರ್ನಲ್ಲಿ .ಈ ಜೊಮ್ಯಾಟೊ ಯುವತಿ ರಸ್ತೆಯಲ್ಲಿ ಜೊಮ್ಯಾಟೋ ಬ್ಯಾಗ್ ಹಾಕಿಕೊಂಡು ಗಮನಸೆಳೆಯುತ್ತಾಳೆ.
ಹಾಗಾದರೆ ಇಷ್ಟು ಚಂದದ ಯುವತಿ ಫುಡ್ ಡೆಲಿವರಿ ಮಾಡ್ತಾಳಾ?ನಾವು ಆರ್ಡರ್ ಕೊಟ್ಟಾಗ ಈಕೆ ಮನೆ ಮುಂದೆ ಬಂದು ಫುಡ್ ಡೆಲಿವರಿ ಮಾಡ್ತಾಳಾ? ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡಾಡ್ತ ಇರಬಹುದು.ಖಂಡಿತ ಇಲ್ಲ,ಏಕೆಂದರೆ ಇದರ ಹಿಂದಿನ ಅಸಲಿ ಸಂಗತಿಯೇ ಬೇರೆ ಇದೆ. ತನ್ನ ಸಂಸ್ಥೆಯ ಪ್ರಚಾರಾರ್ಥವಾಗಿ ಜೊಮ್ಯಾಟೊ ಇಂಥದ್ದೊಂದು ತಂತ್ರ ಅನುಸರಿಸುತ್ತಿರುವುದನ್ನು ಎಕ್ಸ್ ಬಳಕೆದಾರರೊಬ್ಬರು ಬಹಿರಂಗಪಡಿಸಿದ್ದಾರೆ.
ಜೊಮ್ಯಾಟೊದ ಮಾರ್ಕೆಟಿಂಗ್ ಮುಖ್ಯಸ್ಥರೊಬ್ಬರು ರೂಪದರ್ಶಿಯೊಬ್ಬರನ್ನು ಸ್ಟೈಲಿಶ್ ಬೈಕ್ ಹಾಗೂ ಜೊಮ್ಯಾಟೊ ಖಾಲಿ ಬ್ಯಾಗ್ನೊಂದಿಗೆ ರಸ್ತೆಗಿಳಿಸಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ಸಂಚರಿಸುವಂತೆ ಮಾಡಿದ್ದಾರೆ ಎಂಬುದಾಗಿ ರಾಜೀವ್ ಮೆಹ್ತ ಎನ್ನುವವರು ಎಕ್ಸ್ನಲ್ಲಿ ವಿಡಿಯೋ ಸಮೇತ ತಿಳಿಸಿದ್ದಾರೆ.