ನ್ಯೂಸ್ ನಾಟೌಟ್ : ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ ತಮ್ಮ ಪ್ರೇಮ ವಿವಾಹದಿಂದಲೇ ಭಾರಿ ಸುದ್ದಿಯಾಗಿದ್ದರು.ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದವು.ಮಹಾಲಕ್ಷ್ಮೀ ಹಣಕ್ಕಾಗಿ ದಡೂತಿ ಮನಷ್ಯನನ್ನು ಮದುವೆಯಾಗಿದ್ದಾಳೆ ಎಂಬ ಟೀಕೆಗಳು ವ್ಯಕ್ತವಾದವು.
ಆದರೆ, ರವೀಂದರ್ ಇತ್ತೀಚೆಗೆ ವಂಚನೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಚೆನ್ನೈ ಮೂಲದ ಬಾಲಾಜಿ ಗಾಬಾ ಎಂಬುವರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ರವೀಂದರ್ ಅವರನ್ನು ಬಂಧಿಸಲಾಗಿತ್ತು.ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿರುವ ರವೀಂದರ್, ಜೈಲಿಗೆ ಹೋಗುವ ಮುನ್ನ ಪತ್ನಿ ಮಹಾಲಕ್ಷ್ಮಿ ಆಡಿದ ಮಾತನ್ನು ನೆನೆದು ಭಾವುಕರಾಗಿದ್ದಾರೆ.
ಮಹಾಲಕ್ಷ್ಮಿ, ನನ್ನ ಹೆಂಡತಿ ಅನ್ನುವುದಕ್ಕಿಂತ ಆಕೆ ತಾಯಿಗೆ ಸಮ. ನನ್ನ ತಾಯಿಯ ಬಳಿಕ ನನಗೆ ದೇವರು ಕೊಟ್ಟ ವರ.ಯಾರೂ ಕೂಡ ನಮ್ಮಿಬ್ಬರನ್ನು ಬೇರೆ ಮಾಡಲು ಸಾಧ್ಯವಿಲ್ಲ.ಆದರೆ ವಂಚನೆ ಪ್ರಕರಣದಲ್ಲಿ ನನ್ನನ್ನು ಬಂಧಿಸಿ, ಪುಲ್ಹಾಲ್ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ಈ ವೇಳೆ ಮಹಾಲಕ್ಷ್ಮಿ, ಬಾರಿ ಬೇಸರವನ್ನು ವ್ಯಕ್ತ ಪಡಿಸಿದ್ದಳು.ಜೈಲಿನಲ್ಲಿ ನೀವು ಹೇಗೆ ಕುಳಿತುಕೊಳ್ಳುತ್ತೀರಾ ಕೇಳಿದಾಗ,ನಾನು ಅಕ್ಷರಶಃ ಕುಸಿದುಬಿಟ್ಟೆ ಎಂದು ಭಾವುಕರಾದರು.
ಯಾಕೆಂದರೆ ಇತರರ ದೇಹದಂತೆ ನನ್ನ ದೇಹವಿಲ್ಲ.ನಾನು ಹೇಳಿದ ಹಾಗೆ ನನಗೆ ಸ್ಪಂದಿಸುವುದಿಲ್ಲ.ನಾನು ಯಾವುದೇ ವಂಚನೆ ಮಾಡಿಲ್ಲ.ಆದರೆ ನಾನು ಎಷ್ಟೇ ಹೇಳಿದರೂ ನನ್ನನ್ನು ಬಂಧಿಸಿ ಕರೆದೊಯ್ದರು. ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದರು. ಇಂದಿನಿಂದ ನಾನು ಅವನನ್ನು (ಬಾಲಾಜಿ ಗಾಬಾ) ಸುಮ್ಮನೆ ಬಿಡುವುದಿಲ್ಲ ಎಂದು ರವೀಂದರ್ ಕಣ್ಣೀರಿಟ್ಟರು.
ಬಾಲಾಜಿ ಗಾಬಾ ಅವರನ್ನು ರವೀಂದರ್ ನಂಬಿಸಿ ವಂಚನೆ ಮಾಡಿದ್ದರು ಎಂಬ ಆರೋಪದಲ್ಲಿ ಅವರಿಗೆ ಶಿಕ್ಷೆಯಾಗಿತ್ತು.ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪುರಸಭೆಯಲ್ಲಿ ಪ್ರಾರಂಭಿಸುತ್ತೇವೆ ಆ ಯೋಜನೆಗೆ 200 ಕೋಟಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಕಾಣಬಹುದೆಂದು ಹೇಳಿ ಹಣದ ಆಸೆಗೆ ಬಿದ್ದ ಬಾಲಾಜಿ ಗಾಬಾ, ರವೀಂದರ್ ತೋರಿಸಿದ ದಾಖಲೆಗಳನ್ನು ನಂಬಿ 16 ಕೋಟಿ ರೂ. ವರೆಗೆ ಹೂಡಿಕೆ ಮಾಡಿದ್ದರು ಎನ್ನಲಾಗಿತ್ತು.ಹೀಗಾಗಿ ಹೇಳಿದ ಸಮಯಕ್ಕೆ ಯೋಜನೆ ಆರಂಭಿಸದಿದ್ದಾಗ ಬಾಲಾಜಿ ಗಾಬಾ ಅವರು ರವೀಂದರ್ ಬಳಿ ಹಣ ವಾಪಸ್ ಕೇಳಿದ್ದಾರೆ. ಆದರೆ, ಹಣವನ್ನು ಕೊಡಲು ಒಪ್ಪದ ರವೀಂದರ್ ಬೆದರಿಕೆ ಹಾಕಿದರು ಎಂಬ ಆರೋಪವಿತ್ತು. ಅಲ್ಲದೆ, ಅವರು ನೀಡಿದ್ದ ನಾಲ್ಕು ಚೆಕ್ ಬೌನ್ಸ್ ಆಗಿದೆ ಎಂದು ಬಾಲಾಜಿ ಗಾಬಾ ಅವರು ನೀಡಿದ ದೂರಿನ ಆಧಾರದ ಮೇಲೆ ರವೀಂದರ್ರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.
ಮಹಾಲಕ್ಷ್ಮೀ ಮತ್ತು ರವಿಂದರ್ ಇಬ್ಬರು ತಿರುಪತಿಯಲ್ಲಿ ಕಳೆದ ವರ್ಷ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್ ಆಚರಿಸಿದರು.ಇಬ್ಬರಿಗೂ ಕಾಮೆಂಟ್ಗಳಲ್ಲಿಯೂ ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸದೃಢಳಾಗಿದ್ದೇನೆ ಎಂದಿದ್ದಾರೆ.
ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ.