ನ್ಯೂಸ್ ನಾಟೌಟ್ : ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಈ ಘಟನೆ ವರದಿಯಾಗಿದ್ದು, 27 ವರ್ಷದ ಶ್ರೀ ಮೂಕಾಂಬಿಕಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ (SMIMS) 2ನೇ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.ಆಕೆಯ ಕೋಣೆಯಲ್ಲಿದ್ದ ಡೆತ್ನೋಟ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.
ಡೆತ್ನೋಟ್ನಲ್ಲಿ ಸಾವಿಗೆ ಕಾರಣವನ್ನು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಹಲವರ ಹೆಸರುಗಳನ್ನು ಉಲ್ಲೆಖ ಮಾಡಿದ್ದು, ‘ನನ್ನ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿನಿಯರ್ಗಳು ನನಗೆ ಲೈಂಗಿಕ ಕಿರುಕುಳ ನೀಡಿದ್ದರು.ಮಾತ್ರವಲ್ಲದೇ ಮಾನಸಿಕವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿದ್ದಾಳೆ. ‘ಕ್ಷಮಿಸಿಬಿಡಿ ಅಪ್ಪಾ.. ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ’ ಅಂತಾ ಬರೆದಿದ್ದಾಳೆ ಎಂದು ತಿಳಿದು ಬಂದಿದೆ.
‘ಖಿನ್ನತೆಯಿರುವ ಜನರು ಸಹ ಸಂತೋಷವಾಗಿರುವುದನ್ನು ಕಾಣಬಹುದು. ದಯೆಯಿಂದಿರಿ, ನಿರ್ಣಯಿಸಬೇಡಿ. ನಿಮ್ಮ ಕುಟುಂಬಕ್ಕಾಗಿ ಖುಷಿಯಿಂದ ಇರಿ’ ಎಂದು ಬರೆದಿದ್ದಾಳೆ. ವಿದ್ಯಾರ್ಥಿನಿಯ ಡೆತ್ನೋಟ್ ಆಧರಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆಕೆ ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ಜನರ ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣವು ತಮಿಳುನಾಡು ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ರವಿ ಅವರ ಗಮನ ಸೆಳೆದಿದೆ. ಅವರು ಸಹ ವಿದ್ಯಾರ್ಥಿನಿಯ ಡೇತ್ನೋಟ್ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನಾನು ವಿದ್ಯಾರ್ಥಿನಿಯ ಸೂಸೈಡ್ ನೋಟ್ ಗಮನಿಸಿದೆ.ಈ ಬಗ್ಗೆ ತನಿಖೆ ನಡೆಸಬೇಕು.ಇಂತಹ ಕಿರುಕುಳವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.ರಾಷ್ಟ್ರೀಯ ಪ್ರಶಸ್ತಿ ವಿಜೇತ ಗಾಯಕಿ ಚಿನ್ಮಯಿ ಸಹ ಈ ಪ್ರಕರಣದ ಸಮಗ್ರ ತನಿಖೆಗಾಗಿ ಆಗ್ರಹಿಸಿದ್ದಾರೆ. ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಇಂಟರ್ನ್ಶಿಪ್ ಸಮಯದಲ್ಲಿ ಎದುರಿಸುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.