ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದ ಆಲೆಟ್ಟಿ ರಸ್ತೆಯಲ್ಲಿನ ಗುರುಂಪು ಬಳಿ ಬರೆ ಕುಸಿದು ಮೂವರು ದಾರುಣವಾಗಿ ಅಂತ್ಯ ಕಂಡಿದ್ದ ಘಟನಾ ಸ್ಥಳದಲ್ಲಿ ಮತ್ತೆ ಕೆಲಸ ಕಾರ್ಯಗಳನ್ನು ಆರಂಭಿಸಲಾಗಿದೆ.ಈ ಹಿಂದೆ ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಲಸ ಕಾರ್ಯಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿ ಎಂದು ಜಿಲ್ಲಾಧಿಕಾರಿಗಳ ಆದೇಶ ಇದ್ದರೂ ಕೂಡ ಇದೀಗ ಮತ್ತೆ ಜೆಸಿಬಿಗಳ ಮೂಲಕ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ.ಈ ಕಾಮಗಾರಿಯ ಕುರಿತಂತೆ ನಗರ ಪಂಚಾಯತ್ಗೂ ಮೌಖಿಕವಾಗಿ ದೂರು ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.ಅಧಿಕಾರಿಗಳು ಸ್ಥಳಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾರ್ಚ್ 25 2023ರಂದು ಮಧ್ಯಾಹ್ನದ ವೇಳೆಗೆ ಈ ಮಹಾದುರಂತ ಸಂಭವಿಸಿತ್ತು. ಘಟನೆಯಿಂದಾಗಿ ಮೂವರು ವಲಸೆ ಕಾರ್ಮಿಕರು ಉಸಿರು ಚೆಲ್ಲಿದ್ದರು.ಗುರುಂಪು ಬಳಿ ಕಟ್ಟಡದ ಪಿಲ್ಲರ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು.ಈ ಸಂದರ್ಭ ಬರೆ ಕುಸಿದು ಕಾರ್ಮಿಕರಾದ ಗದಗದ ಮುಂಡರಗಿಯ ಸೋಮಶೇಖರ್, ಶಾಂತ ದಂಪತಿ ಹಾಗೂ ಮತ್ತೊರ್ವ ದುರಂತ ಅಂತ್ಯ ಕಂಡಿದ್ದರು.