ನ್ಯೂಸ್ ನಾಟೌಟ್ :ಮಹಿಳೆಯರು ಬೈಕ್ ಮೇಲೆ ಕೂರುವಾಗ ಬಹಳ ಹುಷಾರಾಗಿರಬೇಕಾಗುತ್ತದೆ. ಅದರಲ್ಲೂ ಸೀರೆ ಅಥವಾ ಚೂಡಿದಾರ್ ಹಾಕಿದಾಗಲಂತೂ ಎಚ್ಚರದಿಂದಲೇ ಇರಬೇಕಾಗುತ್ತದೆ.ಇಲ್ಲ ಅಂದರೆ ಸೀರೆ ಸೆರಗು ಅಥವಾ ದುಪ್ಪಟ್ಟ ಚಕ್ರಕ್ಕೆ ಸಿಕ್ಕಾಕಿಕೊಂಡರೆ ಅವಘಡಗಳಾಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಇದೀಗ ಇಂಥದ್ದೇ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿಯಿಂದ ವರದಿಯಾಗಿದೆ.
ಸುಳ್ಯದ ಎಲಿಮಲೆಯ ಶಾಂಭವಿ ಎಂಬವರು ಬೈಕಿನಲ್ಲಿ ಹಿಂಬದಿ ಕುಳಿತುಕೊಂಡು ಸುಳ್ಯಕ್ಕೆ ಬರುತ್ತಿದ್ದರು ಎನ್ನಲಾಗಿದೆ.ಈ ವೇಳೆ ಅವರ ಸೀರೆಯ ಸೆರಗು ಬೈಕಿನ ಚಕ್ರಕ್ಕೆ ಸಿಲುಕಿಕೊಂಡಿದೆ.ಇದರ ಪರಿಣಾಮವಾಗಿ ಅಪಘಾತ ಸಂಭವಿಸಿದೆ.ಅಪಘಾತದ ರಭಸಕ್ಕೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದು,ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಹಿಳೆ ಕಾಲಿನಲ್ಲಿ ರಕ್ತ ಸ್ರಾವವಾಗಿದ್ದು, ಗಾಯದಲ್ಲಿ ಮಹಿಳೆ ನರಳಾಡುತ್ತಿದ್ದರು ಎನ್ನಲಾಗಿದೆ. ಕೂಡಲೇ ಮಹಿಳೆಯನ್ನು ಸ್ಥಳೀಯರು ಸೇರಿ ಜೀಪೊಂದರಲ್ಲಿ ಸುಳ್ಯ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರ ಮಾನವೀಯ ಗುಣಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.