ನ್ಯೂಸ್ ನಾಟೌಟ್ :ಸುಳ್ಯದ ಎಸ್. ವಿ. ಪ್ರಸಾದ್ ಅವರು ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಇವರು ಮೂಡುಬಿದಿರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು “ಡಿಸೈನ್ ಆ್ಯಂಡ್ ಅನಾಲಿಸಿಸ್ ಆಫ್ ವೇದಿಕ್ ಮಲ್ಟಿಪ್ಲಯರ್ ಫ಼ಾರ್ ಡಿಎಸ್ಪಿ ಪ್ರೊಸೆಸರ್ ” ಎನ್ನುವ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು.ಇವರಿಗೆ ರೇವಾ ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಪ್ರೊಫೆಸರ್ ಡಾ. ಶಶಿಕಲಾ ಜಿ ಮತ್ತು ಮಣಿಪಾಲದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಯೋಮೆಡಿಕಲ್ ವಿಭಾಗದ ಪ್ರೊಫೆಸರ್ ಡಾ. ನಿರಂಜನ.ಎಸ್ ಅವರು ಮಾರ್ಗದರ್ಶನ ನೀಡಿದ್ದಾರೆ.
ಅ. 9 ರಂದು ನಡೆದ ರೇವಾ ವಿಶ್ವವಿದ್ಯಾನಿಲಯದ ಎಂಟನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಿದರು.ತಮ್ಮ ಸಂಶೋಧನೆಯ ಮೂಲಕ ಎರಡು ಪೇಟೆಂಟ್ ಹೊಂದಿರುವ ಎಸ್. ವಿ. ಪ್ರಸಾದ್ ಅವರ ಸಂಶೋಧನಾ ಲೇಖನಗಳು ಉತ್ತಮ ಸೂಚ್ಯಂಕ ಹೊಂದಿರುವ ಹಲವಾರು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿಯೂ ಪ್ರಕಟಗೊಂಡಿವೆ ಅನ್ನೋದು ಹೆಮ್ಮೆಯ ವಿಚಾರ.
ಎಸ್. ವಿ. ಪ್ರಸಾದ್ ಅವರು ಸುಳ್ಯದ ನಿವೃತ್ತ ಮುಖ್ಯೋಪಾಧ್ಯಾಯ ಜಿ. ಶಂಕರನಾರಾಯಣ ಮತ್ತು ಜಿ.ಎಸ್. ವಿಜಯಲಕ್ಷ್ಮಿ ದಂಪತಿಯ ಪುತ್ರ.