ನ್ಯೂಸ್ ನಾಟೌಟ್ :ಕೆಲವೊಂದು ಹಣ್ಣುಗಳು ವಿಷಕಾರಿ ಗುಣವನ್ನು ಹೊಂದಿರುತ್ತವೆ.ಕೆಲವೊಂದು ಸಲ ಹಣ್ಣುಗಳ ಪರಿಚಯವಿದ್ದರೂ ಕಣ್ತಪ್ಪಿ ಅನಾಹುತಗಳಾಗೋದು ಇದೆ.ಹೀಗಾಗಿ ಹಣ್ಣುಗಳ ಬಗ್ಗೆ ಸರಿಯಾದ ಮಾಹಿತಿ ಅತ್ಯಗತ್ಯ.ಇಲ್ಲೊಬ್ಬರು ಮಹಿಳೆ ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ದಾರುಣ ಅಂತ್ಯ ಕಂಡ ಘಟನೆ ಅ.2 ರಂದು ಅಮರಪಡ್ನೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ.
ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಉಸಿರು ಚೆಲ್ಲಿದ ಮಹಿಳೆ ಎಂದು ಗುರುತಿಸಲಾಗಿದೆ.ಈ ಮಹಿಳೆ ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದರು.ಬಳಿಕ ಅದರ ರಸ ತೆಗೆದು ಜ್ಯೂಸ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ.ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು.
ಆದರೆ ದುರದೃಷ್ಟವಶಾತ್ ಮಗಳು ಅನಾರೋಗ್ಯಕ್ಕೆ ಒಳಗಾದರು.ಮೂರು ಮಕ್ಕಳ ತಾಯಿಯಾಗಿರುವ ಲೀಲಾವತಿಯವರಿಗೆ ವಾಂತಿ, ಭೇದಿ ಆರ೦ಭವಾಗಿತ್ತು.ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಯಿಸಲಾಯಿತು.ಆದರೂ ಆರೋಗ್ಯದಲ್ಲಿ ಏನೂ ಸುಧಾರಣೆ ಕಂಡು ಬರಲಿಲ್ಲ.ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅ. 2ರ೦ದು ಮ೦ಗಳೂರಿಗೆ ಕೊ೦ಡೊಯ್ಯಲಾಯಿತು.ವಿಧಿ ಲೀಲೆ ಎಂಬಂತೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಲೀಲಾವತಿಯವರು ಪತಿ ಜಗನ್ನಾಥ ನಾಯ್ಕ ದೊಡ್ಡೇರಿ, ಪುತ್ರರಾದ ಯತೀಶ್, ಯಶ್ವಿನ್, ಪುತ್ರಿ ಅಮೂಲ್ಯ ತ೦ದೆ ಲೋಕಯ್ಯ ನಾಯ್ಕ ಕುಳ್ಳಾಜಿ, ತಾಯಿ ಶ್ರೀಮತಿ ಸರೋಜ ಸೇರಿದಂತೆ ಕುಟು೦ಬಸ್ಥರು, ಬ೦ಧು ಮಿತ್ರರನ್ನು ಅಗಲಿದ್ದಾರೆ.