ನ್ಯೂಸ್ ನಾಟೌಟ್: ಅಪಘಾತಕ್ಕೀಡಾಗಿ ಪುಡಿಪುಡಿಯಾಗಿ ನಿಂತಿದ್ದ ಸುಳ್ಯದಲ್ಲಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಬಗ್ಗೆ ಹಲವು ಸಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಯಾರೂ ಕ್ಯಾರೆ ಅಂದಿರಲಿಲ್ಲ. ಆದರೆ ಇದೀಗ ಈ ವಾಹನವನ್ನು ತೆರವುಗೊಳಿಸುವ ಕಾರ್ಯ ನಡೆದಿರುವುದು ವಿಶೇಷ.
2020 ರಲ್ಲಿ ಸುಳ್ಯದ ಅಡ್ಕಾರ್ ಬಳಿ ಟೆಸ್ಟ್ ಡ್ರೈವ್ಗೆ ಕೊಂಡು ಬಂದಿದ್ದ ಅಗ್ನಿ ಶಾಮಕ ವಾಹನ ಅಪಘಾತಕ್ಕೀಡಾಗಿತ್ತು. ಅದರೊಳಗಿದ್ದವರು ಸಂಭವನೀಯ ದುರಂತದಿಂದ ಕ್ಷಣಾರ್ಧದಲ್ಲಿ ಪಾರಾಗಿದ್ದರು. ಆದರೆ ಆ ವಾಹವವನ್ನು ಅಗ್ನಿ ಶಾಮಕ ಕೇಂದ್ರದ ಬಳಿ ಇರಿಸಲಾಗಿತ್ತು.
ಆದರೆ ಅದನ್ನು ತೆರವುಗೊಳಿಸುವ ಕಾರ್ಯ ನಡೆದಿರಲಿಲ್ಲ. ಮೂರು ವರ್ಷಗಳ ನಂತರ ಇದೀಗ ಅದನ್ನು ಸ್ಕ್ರಾಪ್ ಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.