ನ್ಯೂಸ್ ನಾಟೌಟ್: ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರ ಅಪರಿಚಿತ ಬಂದೂಕುಧಾರಿಗಳ ಗುಂಡಿಗೆ ಪಾಕ್ ನಲ್ಲಿ ಬಲಿಯಾಗಿದ್ದಾನೆ.
ಪಾಕಿಸ್ತಾನದ ಉತ್ತರ ವಜೀರಿಸ್ತಾನ್ನಲ್ಲಿ ಭಯೋತ್ಪಾದಕ ದಾವೂದ್ ಮಲಿಕ್ನನ್ನು ಅಪರಿಚಿತರು ಗುಂಡಿಕ್ಕಿದ್ದಾರೆ. ದಾವೂದ್ ಮಲಿಕ್, ಲಷ್ಕರ್-ಎ-ಜಬ್ಬಾರ್ ಸಂಸ್ಥಾಪಕ ಮತ್ತು ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಮೌಲಾನಾ ಮಸೂದ್ ಅಜರ್ನ ನಿಕಟ ಸಹಾಯಕ ಎನ್ನಲಾಗಿದೆ.
ದಾವೂದ್ ಮಲಿಕ್ ಖಾಸಗಿ ಕ್ಲಿನಿಕ್ನಲ್ಲಿದ್ದಾಗ ಆತನ ಮೇಲೆ ದಾಳಿ ನಡೆದಿದೆ. ಅಪರಿಚಿತರು ಆತನನ್ನು ಹೊಂಚು ಹಾಕಿ ಗುಂಡಿಟ್ಟು ಮುಗಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಯು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಡುವೆ ಯುದ್ಧದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದಾವೂದ್ ಮಲಿಕ್ ಉಗ್ರಗಾಮಿ ಸಿದ್ಧಾಂತಗಳ ಪ್ರಬಲ ಪ್ರತಿಪಾದಕನಾಗಿದ್ದ. ಉಗ್ರಗಾಮಿ ಸಂಘಟನೆ ಲಷ್ಕರ್-ಎ-ಜಬ್ಬಾರ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೀಗಾಗಿ ಭದ್ರತಾ ಏಜೆನ್ಸಿಗಳು ಈತನಿಗಾಗಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದವು.
ಈ ಹಿಂದೆ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಎಲ್ಇಟಿ ಮುಖ್ಯಸ್ಥನ ಆಪ್ತ ಸಹಾಯಕನಾಗಿದ್ದ ಖೈಸರ್ ಫಾರೂಕ್ನನ್ನು ಕರಾಚಿಯಲ್ಲಿ ಅಂತ್ಯ ಮಾಡಲಾಗಿತ್ತು.