ನ್ಯೂಸ್ ನಾಟೌಟ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಶಾಂತಿಗ್ರಾಮ, ಹಾಸನ ಜಿಲ್ಲೆ ಇದರ ವತಿಯಿಂದ ಶಾಂತಿಗ್ರಾಮ ಯೋಜನಾ ವ್ಯಾಪ್ತಿಯ ಮೂಲದುದ್ದ , ಬೋಗಾರಹಳ್ಳಿ ಮತ್ತು ಅನುಗವಳ್ಳಿಯ ಅಸಹಾಯಕ ಪರಿಸ್ಥಿತಿಯಲ್ಲಿರುವವರಿಗೆ ಅನುಕೂಲವಾಗುವಂತೆ ಮಂಜೂರು ಮಾಡಿದ ವಿವಿಧ ಪರಿಕರಗಳನ್ನು ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರ ಕಲ್ಪನೆಯಂತೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿವಿಧ ಪರಿಕರಗಳನ್ನು ಯೋಜನೆಯ ಹಾಸನ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ಯೋಜನಾಧಿಕಾರಿ ನವೀನ್ ಎಂ., ಮೇಲ್ವಿಚಾರಕ ಕೇಶವ್ ನಾಯ್ಕ , ಸೇವಾಪ್ರತಿನಿಧಿಗಳಾದ ದೀಪು, ಶಹನವಾಜ್, ಸರೋಜ ಫಲಾನುಭವಿಗಳು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಶಾಂತಿಗ್ರಾಮ, ಹಾಸನ ಜಿಲ್ಲೆಯ ವತಿಯಿಂದ 16 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಲಾದ ಹೆರಗು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಚ್. ಭೈರಾಪುರದ ದೊಡ್ಡಕಟ್ಟೆ ಕೆರೆಯ ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ , ಯೋಜನಾಧಿಕಾರಿ ನವೀನ್ ಎಂ., ಕೆರೆ ಸಮಿತಿಯ ಅಧ್ಯಕ್ಷ ಚಂದ್ರು ,ಉಪಾಧ್ಯಕ್ಷ ದಿನೇಶ್, ಮೇಲ್ವಿಚಾರಕ ಕೇಶವ್ ನಾಯ್ಕ , ಪ್ರಜ್ವಲ್ ಮೊದಲಾದವರು ಉಪಸ್ಥಿತರಿದ್ದರು.