ನ್ಯೂಸ್ನಾಟೌಟ್: ಮಂಡಲ ಹಾಗೂ ಮಕರ ಜ್ಯೋತಿಗಾಗಿ ಶಬರಿ ಮಲೆಗೆ ಬರುವ ಅಯ್ಯಪ್ಪ ಭಕ್ತರ ವಾಹನಗಳು ಹೂವಿನಿಂದ ಅಲಂಕೃತಗೊಂಡು ಬರುತ್ತವೆ. ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದ ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಬರುವ ವಾಹನಗಳನ್ನು ಹೂವಿನ ಸಹಿತ ಅಲಂಕಾರಗೊಳಿಸಲಾಗುತ್ತದೆ.
ಇದನ್ನು ನಿಷೇಧಿಸಿ ಕೇರಳ ಹೈಕೋರ್ಟ್ ಆದೇಶ ಹೊರಡಿಸಿದ ಅಚ್ಚರಿಯ ಘಟನೆ ನಡೆದಿದೆ.ಸರಕಾರಿ ಸೌಮ್ಯದ ಕೆಎಸ್ಆರ್ಟಿಸಿ ಸಹಿತ ಬಸ್ಗಳಿಗೂ ಅನ್ವಯವಾಗುಂತೆವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಮತ್ತು ಹಿಂದಿನ ಆದೇಶದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಅಲಂಕೃತ ವಾಹನಗಳೊಂದಿಗೆ ಬರುವುದು ಭದ್ರತಾ ದೃಷ್ಟಿಯಿಂದ ಅಪಾಯವೆಂದು ನ್ಯಾಯಾಲಯ ತಿಳಿಸಿದೆ ಎನ್ನಲಾಗಿದೆ.ಸಾಮಾನ್ಯವಾಗಿ ಅಯ್ಯಪ್ಪ ಭಕ್ತರು ಇರು ಮುಡಿಕಟ್ಟದೊಂದಿಗೆ ವಾಹನಗಳನ್ನು ಅಲಂಕರಿಸುತ್ತಾರೆ. ವಾಹನಗಳನ್ನು ಹೂವು ಮತ್ತು ಎಲೆಗಳಿಂದ ಅಲಂಕರಿಸಬಾರದು ಮತ್ತು ಇದು ಮೋಟಾರು ವಾಹನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಸೂಚಿಸಿದೆ.
ಅಲ್ಲದೆ, ಸರ್ಕಾರಿ ಬೋರ್ಡ್ ಹಾಕಿ ಬರುವ ಯಾತ್ರಿ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಸಿದೆ.ಈ ಮಧ್ಯೆ, ಈ ವರ್ಷದ ಶಬರಿಮಲೆ ಮಂಡಲ ಹಾಗೂ ಮಕರ ಮಹೋತ್ಸವಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಯಲಿದೆ.
ಕೇರಳ ಸಿಎಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮುಜರಾಯಿ ಖಾತೆ ಸಚಿವ ಕೆ. ರಾಧಾಕೃಷ್ಣನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮಂಡಲ ಮಹೋತ್ಸವಕ್ಕಾಗಿ ನವೆಂಬರ್ 17 ರಂದು ಶಬರಿಮಲೆ ಬಾ ಗಿ ಲು ತೆರೆಯಲಾಗುತ್ತದೆ.