ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹಿರೋ ಸದಾ ಹಸನ್ಮಖಿಯಾಗಿ ಎಲ್ಲರನ್ನು ಸೆಳೆಯುವ ಪ್ರತಿಭಾವಂತ ನಟರಲ್ಲೊಬ್ಬರಲ್ಲಿ ರಮೇಶ್ ಅರವಿಂದ್ ಕೂಡ ಒಬ್ಬರು.ವಯಸ್ಸಾದರೂ ಈಗಲೂ ಯುವಕನಂತೆ ಕಾಣಿಸಿಕೊಳ್ಳುತ್ತಿರುವ ಈ ನಟನ ಬ್ಯೂಟಿ ಸೀಕ್ರೆಟ್ ಈಗಲೂ ಸೀಕ್ರೇಟ್ ಆಗಿಯೇ ಇದೆ. ಈಚೆಗಷ್ಟೇ 59ನೇ ವರ್ಷವನ್ನೂ ಪೂರೈಸಿರುವ ರಮೇಶ್ ವೇದಿಕೆ ಮೇಲೆ ಅಡಿಯಿಟ್ಟರೆ ಯುವಕರನ್ನೂ ನಾಚಿಸುತ್ತಾರೆ.
ಇವೆಲ್ಲವುಗಳ ನಡುವೆಯೇ ರಮೇಶ್ ಈಗ ಲಕಲಕ ಹೊಳೆಯುತ್ತಾ ಬಂಗಾರವ ಮನುಷ್ಯ ಆಗಿದ್ದಾರೆ!. ಈ ಹೊಸ ಲುಕ್ ಇರುವ ವಿಡಿಯೋ ಶೇರ್ ಮಾಡಿಕೊಂಡಿದ್ದು, ಹೊಸ ಚಿತ್ರನಾ ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಹಿಂದೆಂದೂ ಕಂಡರಿಯದ ವಿಶೇಷ ಲುಕ್ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೂ ಕುತೂಹಲ ಇಮ್ಮಡಿಯಾಗಿದೆ.
ಅಷ್ಟಕ್ಕೂ ಇವರು ಈ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಯಾವ ಚಿತ್ರಕ್ಕೂ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ‘ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್’ ಅವರು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಚರಿಸುತ್ತಿರುವ ‘ಬೆಂಗಳೂರು ಗೋಲ್ಡ್ ಫೆಸ್ಟಿವಲ್ನ’ ಹೊಸ ಲುಕ್ ಇದು. ಹೌದು.ಈ ಉತ್ಸವಕ್ಕೆ ರಮೇಶ್ ಅವರು ರಾಯಭಾರಿ ಆಗಿದ್ದಾರೆ. ಇದಕ್ಕಾಗಿಯೇ ಮೈತುಂಬ ಚಿನ್ನಾಭರಣಗಳನ್ನು ಧರಿಸಿದ್ದು, ಬಂಗಾರ ವರ್ಣದ ಪ್ಯಾಂಟ್ ಮತ್ತು ಸೂಟ್ನಲ್ಲಿ ಮಿಂಚಿದ್ದಾರೆ ರಮೇಶ್ ಅರವಿಂದ್.ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅಕ್ಟೋಬರ್ 15ರಿಂದ ಈ ಉತ್ಸವ ಆರಂಭಗೊಂಡಿದ್ದು 45 ದಿನಗಳ ಕಾಲ ನಡೆಯಲಿದೆ.
https://www.instagram.com/reel/CyaLyJ8rtd0/?utm_source=ig_embed&utm_campaign=loading
https://www.instagram.com/reel/CyaLyJ8rtd0/?utm_source=ig_embed&utm_campaign=loading
ದುಬೈ ಗೋಲ್ಡ್ ಫೆಸ್ಟಿವಲ್ ಮಾದರಿಯಲ್ಲಿ ಈ ಉತ್ಸವ ಆಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೆಂಗಳೂರು ವೈವಿಧ್ಯತೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರವಾಸೋದ್ಯಮ ಉತ್ತೇಜಿಸುವುದು ಇದರ ಮೂಲ ಉದ್ದೇಶವಾಗಿದೆ. ‘ಚಿನ್ನ ಉಳಿಸಿ, ಚಿನ್ನ ನಿಮ್ಮನ್ನು ಉಳಿಸುತ್ತದೆ’ ಎಂಬ ಘೋಷವಾಕ್ಯದಡಿ 2ನೇ ಆವೃತ್ತಿಯ ಉತ್ಸವ ಇದಾಗಿದ್ದು, ಬೆಂಗಳೂರು ಮತ್ತು ತುಮಕೂರು, ಹಾಸನ ಮತ್ತು ಶಿವಮೊಗ್ಗ ಸೇರಿದಂತೆ ಎರಡನೇ ಶ್ರೇಣಿಯ ಸುಮಾರು 200 ಚಿನ್ನಾಭರಣ ಮಳಿಗೆಗಳು ಪಾಲ್ಗೊಂಡಿವೆ.
ಇದಕ್ಕೆ ರಮೇಶ್ ಅರವಿಂದ ರಾಯಭಾರಿಯಾಗಿದ್ದಾರೆ. ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರತಿ 5 ಸಾವಿರ ರೂಪಾಯಿಗೆ ಒಂದು ಕೂಪನ್ ನೀಡಲಾಗುತ್ತದೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ 2.5 ಕೆ.ಜಿ.ಬಂಗಾರ, 43 ಕೆ.ಜಿ. ಬೆಳ್ಳಿ, ಒಂದು ಐ10 ಕಾರು ಒಳಗೊಂಡಂತೆ ಅಂದಾಜು 2 ಕೋಟಿ ರೂ. ಬಹುಮಾನ ನೀಡಲಾಗುವುದು. ಲಕ್ಕಿ ಡ್ರಾ ಸಂಪೂರ್ಣವಾಗಿ ಡಿಜಿಟಲ್ ಮೂಲಕ ನಡೆಯಲಿದೆ.