ನ್ಯೂಸ್ ನಾಟೌಟ್: ಕನ್ನಡ ಪರ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗಿರುವ ಗೂನಡ್ಕದ ಸಜ್ಜನ ಪ್ರತಿಷ್ಠಾನ ಇದೀಗ ವಿದೇಶದಲ್ಲಿ ಸ್ನೇಹ ಕೂಟವನ್ನು ಆಯೋಜಿಸಿದೆ. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬಿಎಫ್ಎ ಆಶ್ರಯದಲ್ಲಿ ಸ್ನೇಹ ಕೂಟವನ್ನು ಆಯೋಜಿಸಲಾಗಿದೆ. 10 ದಿನ 7 ಎಮಿರೇಟ್ಸ್ ಭೇಟಿ ಚರ್ಚೆ ವಿನಿಮಯದ ಮೂಲಕ ಸಂಪನ್ನಗೊಳ್ಳಲಿದೆ.
ಅಕ್ಟೋಬರ್13 ರಂದು ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದ ಕಟ್ಟೆಯವರು ದುಬೈಗೆ ತೆರಳಿದ್ದಾರೆ. ಇವರ ನೇತೃತ್ವದಲ್ಲಿ ಸಜ್ಜನ ತಂಡ ಯುಎಇ ಘಟಕ ವತಿಯಿಂದ ಕನ್ನಡಿಗರು ಕನ್ನಡದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಸಜ್ಜನ ಸಂಸ್ಥೆ ಬಗ್ಗೆ ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
ಈಗಾಗಲೇ ಮೈಸೂರು, ಕೋಲಾರ, ಕಲಬುರಗಿ , ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆ ಸಜ್ಜನ ಪ್ರತಿಷ್ಠಾನ ಸ್ನೇಹ ಕೂಟವನ್ನು ನಡೆಸಿದೆ. ಇನ್ನು ಮುಂದಿನ ದಿನಗಳಲ್ಲಿ ವಿದೇಶಗಳಲ್ಲೂ ಸಕ್ರೀಯ ಸ್ನೇಹ ಕೂಟ ನಡೆಸುವುದಕ್ಕೆ ಎಲ್ಲ ತಯಾರಿಯನ್ನೂ ನಡೆಸಲಾಗಿದೆ. ಈ ಬಗ್ಗೆ ಉಮ್ಮರ್ ಬೀಜದ ಕಟ್ಟೆಯವರು ಅತ್ಯುತ್ಸಾಹವನ್ನು ವಹಿಸಿದ್ದು ದುಬೈಯಲ್ಲಿ ಸಜ್ಜನ ಸ್ನೇಹಕೂಟ ಕಾರ್ಯಕ್ರಮ ಸೆ.13ರಂದು ನಡೆಯಲಿದ್ದು ಅನಿವಾಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ಅನ್ವರ್ ಶಿರೂರ್, ರಿಫಾಯಿ ಗೂನಡ್ಕ, ಪಲ್ಲವಿ ರಾನಡೆ, ಫೈಜಲ್ ಬೀಜದಕಟ್ಟೆಯವರನ್ನು ಸಂಪರ್ಕಿಸಲು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ.