ನ್ಯೂಸ್ನಾಟೌಟ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೃದಯಾಘಾತಕ್ಕೆ ತುತ್ತಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಪುಟಿನ್ ತಮ್ಮ ಅಧಿಕೃತ ಸರ್ಕಾರಿ ನಿವಾಸದ ಬೆಡ್ ರೂಂನಲ್ಲಿ ಇರುವಾಗಲೇ ಹೃದಯಾಘಾತಕ್ಕೆ ತುತ್ತಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ನೆಲದಲ್ಲಿ ಬಿದ್ದಿದ್ದ ಪುಟಿನ್ ಮೊದಲಿಗೆ ಭದ್ರತಾ ಪಡೆ ಸಿಬ್ಬಂದಿ ಗಮನಿಸಿದರು. ನಂತರ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯ್ತು ಎಂದು ತಿಳಿದು ಬಂದಿದೆ. ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ನ ಸಿಬ್ಬಂದಿಯೊಬ್ಬರ ಟೆಲಿಗ್ರಾಂ ಚಾನಲ್ನಲ್ಲಿ ಈ ಕುರಿತ ಮಾಹಿತಿ ಬಹಿರಂಗವಾಗಿದೆ.
ಆದರೆ, ಈ ಟೆಲಿಗ್ರಾಂ ಚಾನಲ್ ನಡೆಸುತ್ತಿರುವವರು ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ ಸಿಬ್ಬಂದಿಯೇ ಅನ್ನೋದ್ರ ಕುರಿತಾದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಘಟನೆ ಅಕ್ಟೋಬರ್ 22 ಭಾನುವಾರವೇ ನಡೆದಿದೆ ಎನ್ನಲಾಗಿದೆ.
ಆದರೆ, ಈ ಕುರಿತಾಗಿ ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ ಅಥವಾ ರಷ್ಯಾದ ಯಾವುದೇ ಮಾಧ್ಯಮಗಳೂ ವರದಿ ಮಾಡಿಲ್ಲ. ರಷ್ಯಾ ಅಧ್ಯಕ್ಷರು ತಮ್ಮ ಬೆಡ್ ರೂಂನಲ್ಲಿ ನೆಲದ ಮೇಲೆ ಬಿದ್ದಿದ್ದರು. ಅವರ ಕಣ್ಣುಗಳು ಮೇಲ್ಮುಖವಾಗಿದ್ದವು ಎಂದು ಟೆಲಿಗ್ರಾಂ ಚಾನಲ್ನಲ್ಲಿ ಹೇಳಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನೂ ರಷ್ಯಾ ಸರ್ಕಾರ ನೀಡಿಲ್ಲ.
ರಷ್ಯಾ ಅಧ್ಯಕ್ಷೀಯ ಕಚೇರಿ ಕ್ರೆಮ್ಲಿನ್ನಲ್ಲಿ ಇರುವ ವೈದ್ಯಕೀಯ ತಂಡ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತುರ್ತು ಚಿಕಿತ್ಸೆ ನೀಡಿದೆ ಅನ್ನೋ ಮಾಹಿತಿ ಇದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈಗ 71 ವರ್ಷ ವಯಸ್ಸು. ಇದೀಗ ರಷ್ಯಾ ಅಧ್ಯಕ್ಷರ ಆರೋಗ್ಯ ಸ್ಥಿತಿ ಹೇಗಿದೆ ಅನ್ನೋದ್ರ ಕುರಿತಾಗಿಯೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ. ಇದು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಮಾಡಿದ ಚಿತ್ರ ಎನ್ನಲಾಗಿದ್ದು, ಇದರ ಬಗ್ಗೆಯೂ ಸ್ಪಷ್ಟತೆ ದೊರೆತಿಲ್ಲ.