ನ್ಯೂಸ್ ನಾಟೌಟ್ : ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ರೋವರ್ಸ್ ಮತ್ತು ರೇಂಜರ್ಸ್ ಘಟಕ ವತಿಯಿಂದ ಪುತ್ತೂರಿನ ಬಿರುಮಲೆ ಬೆಟ್ಟಕ್ಕೆ ಒಂದು ದಿನದ ಅಧ್ಯಯನ ನಿಮಿತ್ತ ಚಾರಣ ಹಾಗೂ ಪ್ರಜ್ಞಾ ಆಶ್ರಮಕ್ಕೆ ಅಕ್ಟೋಬರ್ 21 ಶನಿವಾರದಂದು ಭೇಟಿ ನೀಡಲಾಯಿತು.
ಟ್ರೆಕ್ಕಿಂಗ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿನ ಮರ-ಗಿಡಗಳ ಪರಿಚಯ, ಚಾರ್ಟ್ ಬಳಕೆ ಹಾಗೂ ಸಾಹಸಮಯ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಪ್ರಜ್ಞಾ ಆಶ್ರಮದಲ್ಲಿ ವಿದ್ಯಾರ್ಥಿಗಳಿಂದ ಹಾಡು, ನೃತ್ಯ ಹಾಗೂ ಬೀಜದುಂಡೆ ಬಿತ್ತುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಶೈಕ್ಷಣಿಕ ಭೇಟಿಯನ್ನು ಕಾಲೇಜಿನ ರೋವರ್ಸ್ ಲೀಡರ್ ಉಮೇಶ್ ಹಾಗೂ ರೇಂಜರ್ಸ್ ಲೀಡರ್ ಶೋಭಾ ಎ ಸಂಘಟಿಸಿದ್ದರು. ರೋವರ್ಸ್ ಮತ್ತು ರೇಂಜರ್ಸ್ ಘಟಕದ ಎಲ್ಲಾ ವಿದ್ಯಾರ್ಥಿಗಳು ಅತ್ತ್ಯುತ್ಸಾಹದಿಂದ ಪ್ರತಿಯೊಂದು ಚಟುವಟಿಕೆಗಳಲ್ಲಿ ಪಾಲ್ಗೊಂಡು ಅಧ್ಯಯನ ಭೇಟಿ ಯಶಸ್ವಿಗೊಳಿಸಿದರು ಎಂದು ವರದಿ ತಿಳಿಸಿದೆ.