ನ್ಯೂಸ್ ನಾಟೌಟ್: ದಾರಿ ಮಧ್ಯೆ ಬೆಲೆ ಬಾಳುವ ದಾಖಲೆ ಮಾಹಿತಿಗಳಿದ್ದ ಪರ್ಸ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ವ್ಯಕ್ತಿಯ ಪರ್ಸ್ ಕೊನೆಗೂ ಸಿಕ್ಕಿದೆ. ನ್ಯೂಸ್ ನಾಟೌಟ್ ಚಾನೆಲ್ ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಅದು ಎಲ್ಲ ಕಡೆ ಶೇರ್ ಆಗಿತ್ತು.
ಒಬ್ಬರಿಂದ ಒಬ್ಬರಿಗೆ ಮಾಹಿತಿ ರವಾನೆಯಾಗಿತ್ತು. ಕುಂತೂರುನಿಂದ ಸುಳ್ಯ ಕಡೆಗೆ ಬರುತ್ತಿದ್ದವರಿಗೆ ಪರ್ಸ್ ಬಿದ್ದು ಸಿಕ್ಕಿದೆ. ತಕ್ಷಣ ಅವರು ಆ ಪರ್ಸ್ ಅನ್ನು ತಂದು ಕೂಡಿಂಬಾಳದಲ್ಲಿದ್ದ ಹುಡುಗನಿಗೆ ಕೊಟ್ಟಿದ್ದಾರೆ.
ಆ ಪರ್ಸ್ ನಲ್ಲಿದ್ದ ದಾಖಲೆಗಳನ್ನು ಆ ಹುಡುಗ ತಂದು ತಮ್ಮ ಸಂಬಂಧಿಕರಾದ ಪಂಚಾಯತ್ ಸದಸ್ಯರೊಬ್ಬರಲ್ಲಿ ಕೊಟ್ಟಿದ್ದಾರೆ. ಅವರು ಅದನ್ನು ತಂದು ಪೆರಾಬೆ ಫಯಾಜ್ ಅವರಿಗೆ ಕೊಟ್ಟಿರುತ್ತಾರೆ.
ಫಯಾಜ್ ಅವರು ನ್ಯೂಸ್ ನಾಟೌಟ್ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ವರದಿಯಲ್ಲಿದ್ದ ವಾರಿಸುದಾರರ ಮೊಬೈಲ್ ಸಂಪರ್ಕ ಸಂಖ್ಯೆಯನ್ನ ಸಂಪರ್ಕಿಸಿ ದಾಖಲಾತಿಗಳು ಬಿದ್ದು ಸಿಕ್ಕಿರುವುದನ್ನು ತಿಳಿಸಿದ್ದಾರೆ. ಬಳಿಕ ಅವರನ್ನು ವಾರಿಸುದಾರರನ್ನು ಪೆರಾಬೆಗೆ ಕರೆಸಿ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ವಾರಿಸುದಾರ ಕೆ.ಇ. ಅಬ್ದುಲ್ ರಝಾಕ್ ನೆಲ್ಯಾಡಿ ನ್ಯೂಸ್ ನಾಟೌಟ್ ಚಾನೆಲ್ ಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.