ನ್ಯೂಸ್ ನಾಟೌಟ್ : ಯುವತಿಯೊಬ್ಬಳು ಮದುವೆಯಾಗಲು ನಿರಾಕರಿಸಿದ ಪ್ರಿಯಕರನನ್ನು ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಜಾರ್ಖಂಡ್ನ ಕೊಲ್ಹುವಾ ಎಂಬಲ್ಲಿ ನಡೆದಿದೆ.
ಕೊಲೆಗೈದ ಯುವತಿಯನ್ನು ಅಂಜಲಿ (20) ಎಂದು ಗುರುತಿಸಲಾಗಿದ್ದು, ಧರ್ಮನ್ ಓರಾನ್ (24) ಕೊಲೆಯಾದ ಯುವಕ ಎಂದು ತಿಳಿದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಮದುವೆ ವಿಚಾರ ಬಂದಾಗ ಯುವಕ ನಿರಾಕರಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಯುವತಿ ಆತನನ್ನು ಕೊಲೆಗೈದಿದ್ದಾಳೆ ಎಂಬ ಅನುಮಾನಗಳಿವೆ ಎನ್ನಲಾಗಿದೆ.
ಅಂಜಲಿ ಕೊಲೆಗೆ ಪ್ಲಾನ್ ಮಾಡಿ ಮಾತನಾಡುವ ನೆಪದಲ್ಲಿ ಧರ್ಮನ್ ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿದ್ದಳು. ಸ್ವಲ್ಪ ಹೊತ್ತು ಹರಟೆ ಹೊಡೆದ ನಂತರ ಧರ್ಮನ್ ನೆಲದ ಮೇಲೆ ನಿದ್ರೆಗೆ ಜಾರಿದ್ದಾನೆ ಎನ್ನಲಾಗಿದೆ. ಈ ವೇಳೆ ಮೊದಲೇ ತಂದಿಟ್ಟಿದ್ದ ಕೊಡಲಿಯಿಂದ ಆತನನ್ನು ಕೊಚ್ಚಿ ಹತ್ಯೆಗೈದಿದ್ದಾಳೆ.
ಬಳಿಕ ಶವವನ್ನು ಪೊದೆಯಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಇನ್ನಷ್ಟೇ ಸಂಪೂರ್ಣ ಮಾಹಿತಿ ದೊರಕಬೇಕಿದೆ.