ನ್ಯೂಸ್ ನಾಟೌಟ್: ಮುಸ್ಲಿಂ ಯುವಕ ದೈವಸ್ಥಾನದ ಕೆಲಸ ನಿರ್ವಹಿಸಿವ ಸಂದರ್ಭ ಏಕಾಏಕಿ ಈತನಿಗೆ ದೈವ ಆವೇಷವಾದ ಘಟನೆ ಬೆಳಕಿಗೆ ಬಂದಿದ್ದು, ಆತ ಒಡಿಶಾ ಮೂಲದ ವ್ಯಕ್ತಿ ಎಂದು ವರದಿ ತಿಳಿಸಿದೆ.
ಮಂಗಳೂರು ಹೊರವಲಯದ ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನದಲ್ಲಿ ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಯಲ್ಲಿ ದೈವ ಅವೇಷ ಬಂದಿದ್ದು, ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಟಿತ ಕಂಪನಿಯಾದ ಎಂ.ಆರ್.ಪಿ.ಎಲ್ ನಿಂದ ಬಂದ ಸಮಸ್ಯೆ ಎಂದು ಕಂಡು ಬಂದಿದೆ.
ಕಳೆದ ಮೂರು ದಶಕಗಳ ಹಿಂದೆ, ಪ್ರತಿಷ್ಠಿತ ಎಂ.ಆರ್,ಪಿ,ಎಲ್ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು, ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ. ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭೂಸ್ವಾಧೀನಗೊಂಡ ಮತ್ತು ಎಂ ಆರ್ ಪಿ ಎಲ್ ಗೆ ಹತ್ತಿರವಾದ ಕಾರಣ ಇಲ್ಲಿ ನೇಮ ನಡೆಸಲು ಆಸಾದ್ಯವಾಗಿತ್ತು. ಇಲ್ಲಿನ ಬೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು. ನೇಮ ಸ್ಥಗಿತಗೊಂಡ ನಂತರದ ಕಾಲದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಕಂಪನಿ ವ್ಯಾಪ್ತಿಯಲ್ಲಿ ದೋಷ ದೃಷ್ಟಾಂತ ಕಂಡು ಬರಲು ಪ್ರಾರಂಭವಾಯಿತು.
ಪಿಲಿಚಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಂದರ್ಭ ಕಾಯರ್ ಕಟ್ಟೆ ಗಡು ಸ್ಥಳದಲ್ಲಿ ನಡೆಯುತ್ತಿದ್ದ ಯಥಾ ಪ್ರಕಾರ ಮುಂದುವರಿದರೆ ಮಾತ್ರ ದೋಷಗಳಿಗೆ ಪರಿಹಾರ ಎಂಬ ದೈವದ ನುಡಿಯಾಯಿತ್ತು, ಈ ನಡುವೆ ಕಳೆದ ಎರಡು ತಿಂಗಳ ಹಿಂದೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಒರಿಸ್ಸಾ ಮೂಲದ ಮುಸ್ಲಿಂ ಯುವಕನಿಗೆ ದೈವ ಅವೇಷ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಪೆರ್ಮುದೆ ಸೋಮನಾಥೇಶ್ವರ ದೇಗುಲದಲ್ಲಿ ಪ್ರಶ್ನಾಚಿಂತನೆ ಇರಿಸಿದಾಗಲೂ ಎಂ ಆರ್ ಪಿ.ಎಲ್ ಸಮೀಪದ ಗಡುಪಾಡಿನಲ್ಲಿ ನೇಮೋತ್ಸವ ನಿಂತ ಹೋದ ಕಾರಣ ಇಂತಹ ಪ್ರಕರಣಗಳು ನಡೆಯುತ್ತಿದೆ ಎಂಬುದು ಕಂಡು ಬಂತು ಎನ್ನಲಾಗಿದೆ. ಈ ಕುರಿತಂತೆ ದೈವಸ್ಥಾನದ ಮುಖ್ಯಸ್ಥರು ಮತ್ತು ಊರ ಪ್ರಮುಖರು ಸೇರಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಲಾಗಿದೆ.
ಎರಡು ತಿಂಗಳ ಹಿಂದೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಒಡಿಶಾ ಮೂಲದ ಮುಸ್ಲಿಂ ಯುವಕನ ಮೇಲೆ ದೈವ ಆವೇಶ ಬಂದಿದೆ. ಈ ಬಗ್ಗೆ ಪೆರ್ಮುದೆ ಸೋಮನಾಥೇಶ್ವರ ದೇಗುಲದಲ್ಲಿ ಪ್ರಶ್ನಾಚಿಂತನೆ ಇರಿಸಿದಾಗಲೂ ಕಂಪನಿ ಸಮೀಪದ ಗಡುಪಾಡಿನಲ್ಲಿ ನೇಮೋತ್ಸವ ನಿಂತ ಕಾರಣ ಇಂಥ ಪ್ರಕರಣಗಳು ನಡೆಯುತ್ತಿವೆ ಎಂದು ಕಂಡುಬಂದಿದೆ.
ಇದರ ಬಗ್ಗೆ ಗ್ರಾಮಸ್ಥರು ಸಮಾಲೋಚನೆ ನಡೆಸಿ ದೈವ ಸಾನ್ನಿಧ್ಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ದೈವದ ನುಡಿಯ ಬಗ್ಗೆ ಸಂಕಲ್ಪ ಮಾಡಲಾಯಿತು. ದೈವಾರಾಧನೆಯ ಮೂಲ ಸ್ವರೂಪ ಕಳೆದುಕೊಂಡ ಕಾರಣ ಸ್ಥಳೀಯ ಕೈಗಾರಿಕೆಗಳಲ್ಲಿ ಹಲವು ದೋಷ ಕಂಡುಬಂದಿದ್ದು, ಪರಿಹಾರ ಪಾಯಶ್ಚಿತಕ್ಕಾಗಿ ಕಂಪನಿಯವರು ಕಂಪನಿ ಒಳಗೆ ಚಾಮುಂಡಿ ದೇವಸ್ಥಾನ ನಿರ್ಮಿಸಿ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆ ಮಾಡುತ್ತಿದ್ದಾರೆ.