ನ್ಯೂಸ್ ನಾಟೌಟ್ : ಜೀವನದಲ್ಲಿ ನಿರ್ದಿಷ್ಟವಾದ ಗುರಿ ಹೊಂದಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿಕೆ.ವಿ.ಜಿ ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದು ಸೆನೆಟ್ ಸದಸ್ಯ ಮತ್ತು RGUHS DCI ಸದಸ್ಯ ಡಾ.ಶಿವಶರಣ ಶೆಟ್ಟಿ ಹೇಳಿದರು.
ಅವರು ಕೆ. ವಿ. ಜಿ. ಮೆಡಿಕಲ್ ಕಾಲೇಜು & ಆಸ್ಪತ್ರೆಯ ಆಡಿಟೋರಿಯಂನಲ್ಲಿ ಬುಧವಾರ (ಸೆ.12 ರಂದು) ಆಯೋಜಿಸಿದ LUMIERE 2K-23 ANNUAL DAY CELEBRATION ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಮತ್ತು ಮುಖ್ಯ ಅತಿಥಿ ಸೆನೆಟ್ ಸದಸ್ಯ & RGUHS DCI ಸದಸ್ಯ ಡಾ.ಶಿವಶರಣ ಶೆಟ್ಟಿ ಉದ್ಘಾಟಿಸಿದರು.
ಸಾಧನೆಗೈದ ವಿದ್ಯಾರ್ಥಿಗಳಿಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ. ವಿ. ಚಿದಾನಂದ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿದರು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ಕುರುಂಜಿ ವೆಂಕಟ್ರಮಣ ಗೌಡ ಅವರ ಕೊಡುಗೆ ಮತ್ತು ಸಂಸ್ಥೆಯ ಬೆಳವಣಿಗೆ, ಕಾರ್ಯ ನಿರ್ವಹಣೆ ಮತ್ತುಶೈಕ್ಷಣಿಕ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು .
AOLE ಉಪಾಧ್ಯಕ್ಷೆ ಶೋಭಾ ಚಿದಾನಂದ, AOLE ಸೆಕ್ರೆಟರಿ ಹೇಮನಾಥ ಕೆ.ವಿ., ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸೂಪರಿಂಡೆಂಟ್ ಗೋಪಿನಾಥ್ ಪೈ, ಕೆ.ವಿ.ಜಿ ಸೈಕ್ರೆಟಿಸ್ಟ್ ಎಚ್.ಒ.ಡಿ ಡಾ. ಪೂನಂ, ವಿದ್ಯಾರ್ಥಿ ಪರಿಷತ್ನ ಮುಖ್ಯ ಸಲಹೆಗಾರರು ಡಾ. ಗೀತಾ ದೊಪ್ಪ, ವಿದ್ಯಾರ್ಥಿ ಪರಿಷತ್ನ ಅಧ್ಯಕ್ಷೆ ಗ್ರೀಷ್ಮ ಉನ್ನಿಕೃಷ್ಣನ್, ಉಪಾಧ್ಯಕ್ಷ ಡಾ.ಮನೋಜ್ ಗೌಡ, ಕಾರ್ಯದರ್ಶಿ ಶ್ರೀವತ್ಸ, ಜತೆ ಕಾರ್ಯದರ್ಶಿ ಜಾಸ್ಮಿನ್ ಧಾಕ, ಮತ್ತು ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.