ನ್ಯೂಸ್ ನಾಟೌಟ್: ಭಾರತದಲ್ಲಿ ಸಲಿಂಗಿ ವಿವಾಹದ (Same Sex Marriage) ಅನುಮೋದನೆಗೆ ಸುಪ್ರೀಂ ಕೋರ್ಟ್ ನಿರ್ಧರಿಸಿರುವ ಬೆನ್ನಲ್ಲೇ ಒಂದಷ್ಟು ಮಂದಿ ಸಲಿಂಗಿಗಳ ವಿರೋಧ ವ್ಯಕ್ತವಾಗಿತ್ತು. ಇದೀಗ ಸ್ವತಃ ಸುಪ್ರೀಂ ಕೋರ್ಟ್ ವಕೀಲರಿಂದಲೂ ವಿರೋಧ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿರುವ ಇಬ್ಬರು ವಕೀಲರು ಕೋರ್ಟ್ ನಿರ್ಧಾರವನ್ನು ಟೀಕಿಸಿದ್ದಾರೆ. ಮಾತ್ರವಲ್ಲ ಬಹಿರಂಗವಾಗಿ ಪ್ರಪೋಸ್ ಮಾಡಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಕೋರ್ಟ್ ಆವರಣದಲ್ಲಿಯೇ ಹೊರ ಹಾಕಿದ್ದಾರೆ.
ಸುಪ್ರೀಂ ಕೋರ್ಟ್ ಕಾಂಪ್ಲೆಕ್ಸ್ ಎದುರು ಉಂಗುರ ತೊಡಿಸಿ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಒಬ್ಬರ ಹೆಸರು ಅನನ್ಯಾ ಕೋಟಿಯಾ, ಇನ್ನೊಬ್ಬರ ಹೆಸರು ಉತ್ಕರ್ಷ್ ಸಕ್ಸೇನಾ. ಅನಮ್ಯ ಕೋಟಿಯಾ ಅವರು ಉತ್ಕರ್ಷ ಎದುರು ಮಂಡಿಯೂರಿ ಪ್ರಪೋಸ್ ಮಾಡಿದರು ಮತ್ತು ಉಂಗುರವನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡರು.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ. ದಂಪತಿ ಸುಪ್ರೀಂ ಕೋರ್ಟ್ ವಕೀಲರು, ಲಂಡನ್ನಿಂದ ಅಧ್ಯಯನ ಮಾಡಿದ್ದಾರೆ. ವಿಶೇಷವೆಂದರೆ ಅನನ್ಯ ಮತ್ತು ಉತ್ಕರ್ಷ್ ಇಬ್ಬರೂ ಸುಪ್ರೀಂ ಕೋರ್ಟ್ನಲ್ಲಿ ವಕೀಲರು ಮತ್ತು ಸಲಿಂಗ ವಿವಾಹಕ್ಕೆ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರು.
ಉತ್ಕರ್ಷ್ ಸಕ್ಸೇನಾ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದರೆ, ಅವರ ಸಂಗಾತಿ ಅನನ್ಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪಿಎಚ್ ಡಿ ಮಾಡಿದ್ದಾರೆ. ಇಬ್ಬರೂ ಡಿಯು ಹಂಸರಾಜ್ ಕಾಲೇಜಿನಲ್ಲಿ ಓದುತ್ತಿದ್ದಾಗ ಭೇಟಿಯಾದರು. ನಾವು ಒಬ್ಬರಿಗೊಬ್ಬರು ತುಂಬಾ ಆರಾಮದಾಯಕವಾಗಿದ್ದರೂ ಈ ಲೋಕದ ಮುಂದೆ ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಬಹಳ ದಿನಗಳಿಂದ ಹೇಳಿರಲಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಆಘಾತಕ್ಕೊಳಗಾದ ನಾವು ಸುದೀರ್ಘ ಕಾನೂನು ಹೋರಾಟವನ್ನು ನಡೆಸಿದ್ದೇವೆ ಮತ್ತು ಮತ್ತೊಮ್ಮೆ ನಮ್ಮ ನಿಶ್ಚಿತಾರ್ಥದ ಮೂಲಕ ನಮ್ಮ ಹಕ್ಕುಗಳನ್ನು ಸ್ವೀಕರಿಸಲು ನಿರಾಕರಿಸಿದ ಅದೇ ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.