ನ್ಯೂಸ್ ನಾಟೌಟ್ : ಹೆಚ್ಚಿನವರಿಗೆ ಚಾರಣ ಹೊಗೋದು ಅಂದ್ರೆ ತುಂಬಾ ಇಷ್ಟ.ಅದರಲ್ಲೂ ಸಿಟಿಯಲ್ಲಿರುವವರು ಇಂತಹ ಸ್ಥಳಗಳಿಗೆ ತೆರಳಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುತ್ತಾರೆ.ಆದರೆ ಸದ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರ ಪರ್ವತಕ್ಕೆ ಚಾರಣ ಹೋಗಲು ಅ. 3ರಿಂದ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಆಗಾಗ ಮಳೆ ಸುರಿಯುತ್ತಿರುವ ಕಾರಣ ಈ ಇಂದು ನಿರ್ಧಾರವನ್ನು ಮಾಡಲಾಗಿದೆ.ಜತೆಗೆ ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಕೂಡ ಘೋಷಿಸಿದೆ.ಹೀಗಾಗಿ ಮಳೆಗಾಲದಲ್ಲಿ ಇಂತಹ ಸ್ಥಳಗಳಿಗೆ ತೆರಳುವುದು ತುಂಬಾ ಅಪಾಯಕಾರಿ ಎಂಬ ಹಿನ್ನಲೆಯಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕೂಡ ಒಂದು. ಹೀಗಾಗಿ ಈ ದೇಗುಲಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಅದರಲ್ಲೂ ಶನಿವಾರ ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಇದರ ಜತೆಗೆ ಕುಮಾರ ಪರ್ವತ ಚಾರಣಕ್ಕೂ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಭಾರೀ ಮಳೆಯಿಂದಾಗಿ ಇಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ.
ಇಂತಹ ಕಡಿದಾದ ಬೆಟ್ಟವನ್ನು ಏರಲು ಚಾರಣಿಗರಿಗೆ ಅತಿಯಾದ ಸಂಕಷ್ಟ ಮತ್ತು ಕಷ್ಟವಾಗುವ ಕಾರಣ ಈ ನಿರ್ಬಂಧ ವಿಧಿಸಲಾಗಿದೆ. ಇಲಾಖೆಯ ಈ ಆದೇಶಕ್ಕೆ ಚಾರಣಿಗರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ವಿನಂತಿಸಿದೆ.
ಒಂದೆಡೆ ಮೇ ತಿಂಗಳಿನಿಂದ ಸೆ.29ರ ತನಕ ಬಿರು ಬೇಸಗೆ ಮತ್ತು ಅಧಿಕ ಮಳೆಯ ಕಾರಣ ನಿರ್ಬಂಧ ವಿಧಿಸಲಾಗಿತ್ತು.ಇದೀಗ ಶನಿವಾರದಿಂದ ನಿರ್ಬಂಧ ತೆರವು ಗೊಳಿಸಿ ಚಾರಣಕ್ಕೆ ಮುಕ್ತ ಅವಕಾಶ ನೀಡಲಾಗಿತ್ತಾದರೂ ಮೊದಲ ದಿನವೇ ಬರೋಬ್ಬರಿ 750ಕ್ಕೂ ಹೆಚ್ಚಿನ ಚಾರಣಿಗರು ಇಲ್ಲಿಗೆ ಬಂದು ಪರ್ವತವೇರಲು ಬಂದಿದ್ದರು.
ಆದಿತ್ಯವಾರವೂ ಕೂಡ ಭಾರೀ ಸಂಖ್ಯೆಯಲ್ಲಿ ಚಾರಣಾಸಕ್ತರು ಕುಮಾರಪರ್ವತಕ್ಕೆ ತೆರಳಿ ಅಲ್ಲಿನ ಆನಂದವನ್ನು ಆಹ್ಲಾದಿಸಿದ್ದರು. ಮತ್ತೆ ಹಿಂಗಾರು ಮಳೆ ಚುರುಕಾಗುವ ಸಾಧ್ಯತೆ ಇರೋಂದ್ರಿಂದ ಈ ಎಲ್ಲಾ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಸಹಿತ ಘಾಟಿ ಪ್ರದೇಶದಲ್ಲಿ ಗಾಳಿ ಮತ್ತು ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.