ನ್ಯೂಸ್ ನಾಟೌಟ್: 10 ಅಡಿ ಉದ್ದದ ಹೆಬ್ಬಾವನ್ನು ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಲ್ಲಿ ಸೆರೆ ಹಿಡಿಯಲಾಗಿದೆ.
ಅಕ್ಟೋಬರ್ ೧೩ರಂದು ರಾತ್ರಿ ಹೆಬ್ಬಾವು ಕಲ್ಲುಗುಂಡಿಯ ಕೂಲಿ ಶೆಡ್ ನ ಹೋಟೆಲ್ವೊಂದರ ಅಡಿಗೆ ಕೋಣೆಯ ಪ್ರಿಡ್ಜ್ ಅಡಿಯಲ್ಲಿ ಮಲಗಿತ್ತು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶರತ್ ಕೀಲಾರು ಸಂಪಾಜೆ ಮತ್ತು ತಂಡ ಹಾವನ್ನು ಹಿಡಿದು ಸುರಕ್ಷಿತವಾಗಿ ದೇವರಕೊಲ್ಲಿ ಸಮೀಪದ ಕಾಡಿಗೆ ಬಿಟ್ಟಿದ್ದಾರೆ. ಈ ಸಂದರ್ಭ ಹೋಟೆಲ್ ಮಾಲೀಕ ಲತೀಫ್ ಮತ್ತು ಹನೀಫ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.