ನ್ಯೂಸ್ ನಾಟೌಟ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶುಕ್ರವಾರ ತಮ್ಮ ಪತ್ರಕರ್ತ ಪತಿ ಆಂಡ್ರಿಯಾ ಗಿಯಾಂಬ್ರುನೊ ರಿಂದ ತಾವು ಬೇರ್ಪಟ್ಟಿರುವುದಾಗಿ ಹೇಳಿದ್ದಾರೆ.
“ಆಂಡ್ರಿಯಾ ಗಿಯಾಂಬ್ರುನೋ ಅವರೊಂದಿಗಿನ ನನ್ನ 10 ವರ್ಷಗಳ ಸಂಬಂಧವು ಇಲ್ಲಿಗೆ ಕೊನೆಗೊಳ್ಳುತ್ತದೆ” ಎಂದು ಇಟಲಿ ಪ್ರಧಾನಿ ಮೆಲೋನಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ದಾರಿಗಳು ಕೆಲವೊಮ್ಮೆ ಬೇರೆ ಬೇರೆಯಾಗಿವೆ ಮತ್ತು ಅದನ್ನು ಒಪ್ಪಿಕೊಳ್ಳುವ ಸಮಯ ಈಗ ಬಂದಿದೆ ಎಂದು 46 ವರ್ಷದ ಇಟಾಲಿಯನ್ ಪ್ರಧಾನಿ ತಿಳಿಸಿದ್ದಾರೆ.
ಜಿಯಾಂಬ್ರುನೋ ಮತ್ತು ಜಾರ್ಜಿಯಾ ಮೆಲೋನಿ ಮದುವೆಯಾಗಿಲ್ಲ. ಆದರೆ ದೀರ್ಘಾವಧಿಯಿಂದ ಪಾರ್ಟನರ್ ಆಗಿದ್ದರು ಎನ್ನಲಾಗಿದೆ. ಅವರಿಗೆ ಏಳು ವರ್ಷದ ಮಗಳಿದ್ದಾರೆ ಎಂದು ವರದಿ ತಿಳಿಸಿದೆ.
“ನಾವು ಒಟ್ಟಿಗೆ ಕಳೆದ ಅದ್ಭುತ ವರ್ಷಗಳಿಗಾಗಿ, ನಾವು ಅನುಭವಿಸಿದ ಕಷ್ಟಗಳಿಗಾಗಿ ಮತ್ತು ನನ್ನ ಜೀವನದಲ್ಲಿ ನನಗೆ ಅತ್ಯಂತ ಮುಖ್ಯವಾದ ವಿಷಯ, ಅದು ನಮ್ಮ ಮಗಳು ಗಿನೆವ್ರಾಳನ್ನು ನೀಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಇಟಲಿ ಪ್ರಧಾನಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ಇಟಲಿ ಪ್ರಧಾನಿ ಭೇಟಿ ನೀಡದ ವೇಳೆ ಪ್ರಧಾನಿ ಮೋದಿ ಮತ್ತು ಮೆಲೋನಿ ಕುರಿತು ಭಾರಿ ಟ್ರೋಲ್ ಆಗಿತ್ತು. ಈಗ ಮತ್ತೆ ಸಾಮಾಜಿಕ ಜಾಲತಾಣದ ಮತ್ತೆ ತಮಾಷೆಗೆ ಸುದ್ದಿಯಾಗುತ್ತಿದೆ.