ನ್ಯೂಸ್ ನಾಟೌಟ್: ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ಅಮೆರಿಕಾದ ಎರಡು ಸಂಘಟನೆಗಳಿಗೆ ವಂಚಿಸಿದ 34 ವರ್ಷದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಸುಧಾ ಮೂರ್ತಿ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ಅವರು ಸೆಪ್ಟೆಂಬರ್ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ರಾಜಾಜಿನಗರದ ನಿವಾಸಿ ಅರುಣ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ (ಕೆಕೆಎನ್ಸಿ) ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಿತ್ತು.
ತಂಡವು ಏಪ್ರಿಲ್ 25 ರಂದು ಸುಧಾ ಮೂರ್ತಿ ಅವರಿಗೆ ಪತ್ರ ಬರೆದು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಕೋರಿತ್ತು. ಆದರೆ, ಏಪ್ರಿಲ್ 26 ರಂದು ಮೂರ್ತಿ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಆಗುವುದಿಲ್ಲ ಎಂದು ತಿಳಿಸಿದ್ದರು.
ವಂಚಕ ಆರೋಪಿಯನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು, ತಾನು ಮೂರ್ತಿಯ ಸಿಬ್ಬಂದಿ ಎಂದು ಬಿಂಬಿಸಿಕೊಂಡು ಅಮೆರಿಕಾದಲ್ಲಿನ ಕಾರ್ಯಕ್ರಮಗಳಿಗಾಗಿ ಆಕೆಯ ಹೆಸರಿನಲ್ಲಿ ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದನು. ವಂಚಕ ಅರ್ಚಕನು 5 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದನು ಎನ್ನಲಾಗಿದೆ.
ನಂತರ, ಸುಧಾ ಮೂರ್ತಿ ಅವರ ಸಿಬ್ಬಂದಿ ಎಂದು ಹೇಳಿಕೊಂಡ ಮಹಿಳೆ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ತಂಡವನ್ನು ಸಂಪರ್ಕಿಸಿ ತಾನು ಕಾರ್ಯಕ್ರಮಕ್ಕೆ ಬರುವುದನ್ನು ದೃಢಪಡಿಸಿ 5 ಲಕ್ಷ ರೂ. ಪಡೆದಿದ್ದರು. ಬಳಿಕ ಎರಡನೇ ಪ್ರಕರಣದಲ್ಲಿ ಆರೋಪಿ ಅರುಣ್ ಕುಮಾರ್ ತಾನು ಸುಧಾಮೂರ್ತಿ ಸಿಬ್ಬಂದಿ ಎಂದು ಅಮೆರಿಕಾದ ಮಿಲ್ಪಿಟಾಸ್ನಲ್ಲಿನ ಎನ್ಜಿಒ ಸಮಾರಂಭಕ್ಕೆ ಬರುವುದಾಗಿ ತಿಳಿಸಿದ್ದರು.
ಕಾರ್ಯಕ್ರಮಕ್ಕೆ ಡಾ ಸುಧಾ ಮೂರ್ತಿ ಅವರನ್ನು ಭೇಟಿ ಮಾಡಿ ಮತ್ತು ಶುಭಾಶಯಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು.ಕಾರ್ಯಕ್ರಮದ ಪ್ರತಿ ಟಿಕೆಟ್ ಅನ್ನು $ 40 ಕ್ಕೆ ಮಾರಾಟ ಮಾಡಲಾಗಿತ್ತು.
ಈ ಜಾಹೀರಾತಿನ ಆಧಾರದ ಮೇಲೆ ಮೂರ್ತಿ ಅವರ ಸಿಬ್ಬಂದಿ ಈ ಬಗ್ಗೆ ತನಿಖೆ ನಡೆಸುವಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ವೇಳೆ ಅರುಣ್ ಕುಮಾರ್ ತನ್ನ ಧ್ವನಿಯನ್ನು ಮಹಿಳೆಯಂತೆ ಮಾರ್ಪಡಿಸಿ ಸಂಘಟಕರನ್ನು ಸಂಪರ್ಕಿಸಿ ಹಣ ವಂಚಿಸಿದ ಎರಡು ಪ್ರಕರಣಗಳ ಮಾಸ್ಟರ್ ಮೈಂಡ್ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ವಂಚನೆ ಪ್ರಕರಣದಲ್ಲಿ ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಅರುಣ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.