ನ್ಯೂಸ್ ನಾಟೌಟ್: ದೇಶದ ರಾಜಧಾನಿ ನವದೆಹಲಿಯಲ್ಲಿರುವ ಸಂಸತ್ ಭವನದೊಳಗೆ ಒಮ್ಮೆ ಪ್ರವೇಶಿಸಬೇಕು ಅನ್ನುವುದು ಎಲ್ಲರ ಕನಸಾಗಿರುತ್ತದೆ. ಆದರೆ ಅಲ್ಲಿ ಭಾಷಣ ಮಾಡುವ ಅವಕಾಶ ಸಿಕ್ಕಿದರೆ ಹೇಗಿರಬೇಡ ಹೇಳಿ..? ಇಲ್ಲೊಬ್ಬ ಯುವಕನಿಗೆ ಅಂತಹದ್ದೊಂದು ಅವಕಾಶ ಸಿಕ್ಕಿದ್ದು ಇದೀಗ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ದಡ್ಡಲಕಾಡ್ ನಿವಾಸಿ ಸೌರವ್ ಸಾಲ್ಯಾನ್ (19 ವರ್ಷ) ಇಂತಹ ಅವಕಾಶವೊಂದನ್ನು ಗಿಟ್ಟಿಸಿಕೊಂಡವರು. ಅವರು ನವದೆಹಲಿಯ ಸಂಸತ್ ಭವನದಲ್ಲಿ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವುದಾಗಿ ನೆಹರು ಯುವಕೇಂದ್ರದ ಆಡಳಿತ ಅಧಿಕಾರಿ ಜಗದೀಶ್ ಕೆ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೆಹರು ಯುವ ಕೇಂದ್ರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾಗಿ ಅವರು ಈ ಅವಕಾಶ ಪಡೆದುಕೊಂಡಿದ್ದರು. ಕೆನರಾ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಅವರು ಕಲಾವಿದರಾಗಿದ್ದು ಸೌರವ್ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದಾರೆ. ಓದಿನಲ್ಲೂ ಮುಂದೆ ಇದ್ದಾರೆ ಎಂದು ತಿಳಿಸಿದರು.
‘ಸಂಸತ್ ಭವನದ ಒಳಗೆ ಪ್ರವೇಶಿಸಲು ಸಾಧ್ಯ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಈ ಬಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರ ಪೈಕಿ ನಾನು ಅತಿ ಕಿರಿಯ ಆಗಿದ್ದೆ. ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಮಾತನಾಡಲು ಸೂಚಿಸಲಾಗಿತ್ತು’ ಎಂದು ಸೌರವ್ ತಿಳಿಸಿದರು.
ಸೌರವ್ ತಾಯಿ ಪುಷ್ಪಾವತಿ, ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಲತಾ ವಿ, ಆಡಳಿತಾಧಿಕಾರಿ ದೀಪ್ತಿ ನಾಯಕ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸೀಮಾಪ್ರಭು ಮತ್ತು ಸೌರವ್ ಹಿತೈಷಿ ಪ್ರಿಯಾ ಸುದೇಶ್ ಇದ್ದರು.
ನ್ಯೂಸ್ ನಾಟೌಟ್: ದೇಶದ ರಾಜಧಾನಿ ನವದೆಹಲಿಯಲ್ಲಿರುವ ಸಂಸತ್ ಭವನದೊಳಗೆ ಒಮ್ಮೆ ಪ್ರವೇಶಿಸಬೇಕು ಅನ್ನುವುದು ಎಲ್ಲರ ಕನಸಾಗಿರುತ್ತದೆ. ಆದರೆ ಅಲ್ಲಿ ಭಾಷಣ ಮಾಡುವ ಅವಕಾಶ ಸಿಕ್ಕಿದರೆ ಹೇಗಿರಬೇಡ ಹೇಳಿ..? ಇಲ್ಲೊಬ್ಬ ಯುವಕನಿಗೆ ಅಂತಹದ್ದೊಂದು ಅವಕಾಶ ಸಿಕ್ಕಿದ್ದು ಇದೀಗ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ದಡ್ಡಲಕಾಡ್ ನಿವಾಸಿ ಸೌರವ್ ಸಾಲ್ಯಾನ್ (19 ವರ್ಷ) ಇಂತಹ ಅವಕಾಶವೊಂದನ್ನು ಗಿಟ್ಟಿಸಿಕೊಂಡವರು. ಅವರು ನವದೆಹಲಿಯ ಸಂಸತ್ ಭವನದಲ್ಲಿ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವುದಾಗಿ ನೆಹರು ಯುವಕೇಂದ್ರದ ಆಡಳಿತ ಅಧಿಕಾರಿ ಜಗದೀಶ್ ಕೆ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೆಹರು ಯುವ ಕೇಂದ್ರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾಗಿ ಅವರು ಈ ಅವಕಾಶ ಪಡೆದುಕೊಂಡಿದ್ದರು. ಕೆನರಾ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಅವರು ಕಲಾವಿದರಾಗಿದ್ದು ಸೌರವ್ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದಾರೆ. ಓದಿನಲ್ಲೂ ಮುಂದೆ ಇದ್ದಾರೆ ಎಂದು ತಿಳಿಸಿದರು.
ಯುವಕ ಹೇಳಿದ್ದೇನು..?
‘ಸಂಸತ್ ಭವನದ ಒಳಗೆ ಪ್ರವೇಶಿಸಲು ಸಾಧ್ಯ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಈ ಬಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರ ಪೈಕಿ ನಾನು ಅತಿ ಕಿರಿಯ ಆಗಿದ್ದೆ. ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಮಾತನಾಡಲು ಸೂಚಿಸಲಾಗಿತ್ತು’ ಎಂದು ಸೌರವ್ ತಿಳಿಸಿದರು. ಸೌರವ್ ತಾಯಿ ಪುಷ್ಪಾವತಿ, ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಲತಾ ವಿ, ಆಡಳಿತಾಧಿಕಾರಿ ದೀಪ್ತಿ ನಾಯಕ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸೀಮಾ ಪ್ರಭು ಮತ್ತು ಸೌರವ್ ಹಿತೈಷಿ ಪ್ರಿಯಾ ಸುದೇಶ್ ಇದ್ದರು.