ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಗಂಡ ತನ್ನ ಹೆಂಡತಿಯ ಹೆಸರನ್ನು ಪ್ರೀತಿಯಿಂದ ಅವರಿಗಿಷ್ಟ ಬಂದ ಹಾಗೆ ಸೇವ್ ಮಾಡಿಕೊಳ್ಳುತ್ತಾರೆ.ಇನ್ನೂ ಕೆಲವರು ಅವರ ಒರಿಜಿನಲ್ ಹೆಸರನ್ನು ಸೇವ್ ಮಾಡಕೊಳ್ಳುತ್ತಾರೆ.ಆದರೆ ಇಲ್ಲೊಬ್ಬ ಇದ್ದಾನೆ ತನ್ನ ಹೆಂಡತಿ ಹೆಸರನ್ನು ಏನೆಂದು ಸೇವ್ ಮಾಡಿದ್ದಾನೆ ಗೊತ್ತಾ?ಇದರ ವಿರುದ್ಧ ಆಕೆ ಕೋರ್ಟ್ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.
ಅದೇನಾಯ್ತೋ ಗೊತ್ತಿಲ್ಲ.ಒಂದು ದಿನ ಆಕೆಗೆ ತನ್ನ ಗಂಡ ಮೊಬೈಲ್ನಲ್ಲಿ ನನ್ನ ಹೆಸರನ್ನು ಹೇಗೆ ಸೇವ್ ಮಾಡಿಕೊಂಡಿರಬಹುದೆಂದು ಕುತೂಹಲ ಉಂಟಾಯಿತು.ಹೀಗೆ ಗಂಡನ ಮೊಬೈಲ್ ಬಗ್ಗೆ ಪರೀಕ್ಷಿಸಿದ ಆಕೆಗೆ ದೊಡ್ಡ ಶಾಕ್ ಆಗಿದೆ.
ಹೌದು,ಎಂಥವರಿಗಾದರೂ ಶಾಕ್ ಆಗಿಯೇ ಆಗುತ್ತೆ ಯಾಕೆಂದರೆ ಆಕೆಯ ಹೆಸರನ್ನು ಸೇವ್ ಮಾಡಿದ್ದು,ಚಿನ್ನು,ಚಿನ್ನಾರಿ,ಸ್ವೀಟು ಎಂದೇನು ಅಲ್ಲ.. ಬದಲಾಗಿ ರಾಕ್ಷಸಿ ಎಂದು ಸೇವ್ ಮಾಡಿಕೊಂಡಿದ್ದ ಗಂಡ. ಇದನ್ನು ಗಮನಿಸಿದ ಹೆಂಡತಿ ಕೂಡಲೇ ಮಹಿಳೆ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ..!
ಇಂತಹ ಅಪರೂಪದ ಘಟನೆ ನಡೆದಿದ್ದು,ಉಡುಪಿಯಲ್ಲಿ.ಖಾಸಗಿತನದ ನೆಲೆಯಲ್ಲಿ ಸ್ಕ್ರೀನ್ ಲಾಕ್ ಆಗಿರುವ ಗಂಡನ ಮೊಬೈಲ್ನಲ್ಲಿ ನನ್ನ ನಂಬರ್ ಏನೆಂದು ಸೇವ್ ಇರಬಹುದು ಹೀಗೊಂದು ಕುತೂಹಲ ಮೂಡಿದ್ದೇ ತಡ ಮನೆಯಲ್ಲಿ ಗಂಡ ಸ್ನಾನಕ್ಕೆ ತೆರಳಿದ್ದ ವೇಳೆ ಗಂಡನ ಮೊಬೈಲ್ಗೆ ಕಾಲ್ ಕೊಟ್ಟು ನೋಡಿದ್ದಾಳೆ..!
ಸ್ನಾನ ಮುಗಿಸಿ ಬಂದ ಪತಿಗೆ ಈಕೆಯ ದರ್ಶನ ಕಂಡು ಶಾಕ್ ಆಗಿದೆ.ಮೊಬೈಲ್ನಲ್ಲಿ ಸೇವ್ ಮಾಡಿದ್ದ ಆ ಹೆಸರಿನ ಬಗ್ಗೆ ಪ್ರಶ್ನಿಸಿದಳು. ಈ ಬಗ್ಗೆ ಕೆಂಡಾಮಂಡಲಳಾದ ಆಕೆ ಗಂಡನ ಗ್ರಹಚಾರ ಬಿಡಿಸಿದ್ದಾಳೆ. ಮಾತ್ರವಲ್ಲದೇ ಇದರಿಂದ ನೊಂದ ಉಡುಪಿಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ಮಾನಸಿಕ ಕ್ರೌರ್ಯದ ನೆಲೆಯಲ್ಲಿ ವಿಚ್ಛೇದನದ ಬೇಡಿಕೆಯನ್ನು ಇಟ್ಟಿದ್ದಾಳೆ.
ಈ ಬಗ್ಗೆ ಇಬ್ಬರಿಗೂ ಮನದಟ್ಟು ಮಾಡಲು ಪ್ರಯತ್ನ ಪಟ್ಟ ಜಡ್ಜ್ ದಾಂಪತ್ಯ ಕಾಪಾಡಿಕೊಂಡು ಚೆನ್ನಾಗಿರಿ ಎಂದು ಬುದ್ದಿ ಹೇಳಿ ಕಳಿಸಿದ್ದರು ಎಂದು ತಿಳಿದು ಬಂದಿದೆ.ಗಂಡ/ಹೆಂಡತಿ ಅಥವಾ ಪ್ರೇಮಿಗಳು ಪರಸ್ಪರ ಪ್ರೀತಿಯ ನಿಕ್ ನೇಮ್, ಕೋಡ್ ವರ್ಡ್ ನಮೂದಿಸಿ, ಸ್ವೀಟ್ ಹಾರ್ಟ್ ಇತ್ಯಾದಿ ದಾಖಲಿಸಿದರೆ ತಪ್ಪಾಗದು ಎಂದಿದ್ದಾರೆ. ಗಂಡ, ಹೆಂಡತಿ ಸಹಿತ ಇತತರ ಹೆಸರನ್ನು ಕೂಡ ಮೊಬೈಲ್ ಗಳಲ್ಲಿ ರಿಯಲ್ ಹೆಸರಿನಿಂದ ಸೇವ್ ಮಾಡಿ.ಇಲ್ಲದೇ ಹೋದ್ರೆ ಅದು ಮಾನಸಿಕ ಹಿಂಸೆ, ಕ್ರೌರ್ಯಕ್ಕೆ ಸಮನಾದೀತು ಎಂದು ತಿಳಿಸಲಾಗಿದೆ.
ಯಾವತ್ತೂ ಸಂಪರ್ಕ ಸಂಖ್ಯೆ ಮೊಬೈಲ್ನಲ್ಲಿ ಹೆಸರು ದಾಖಲಿಸುವಾಗ ಖಾಸಗಿತನ, ಗೌರವಕ್ಕೆ ಯಾವುದೇ ಧಕ್ಕೆಯಾಗದಂತೆ, ಮಾನಸಿಕ ಹಿಂಸೆಯಾಗದಂತೆ ಎಚ್ಚರ ವಹಿಸಬೇಕು ಹಾಗೂ ಕೌಟುಂಬಿಕ ನ್ಯಾಯಾಲಯಕ್ಕೆ ಕ್ಷುಲ್ಲಕ ಕಾರಣಗಳಿಗಾಗಿ ಬಂದು ವಿಚ್ಛೇದನ ಕೇಳಿದ್ರೆ ಬುದ್ಧಿ ಹೇಳಿ ನಿಭಾಯಿಸಿ, ದಾಂಪತ್ಯ ಉಳಿಸಿ ಎಂದು ವಿಚ್ಛೇದನ ಕೊಡಿಸಲು ಮುಂದಾಗಿದ್ದ ನ್ಯಾಯವಾದಿಗಳಿಗೆ ಕೋರ್ಟ್ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.