ನ್ಯೂಸ್ ನಾಟೌಟ್ : ಭಾರತೀಯರಿಗೆ ಗಂಗೆ ಪರಮಪವಿತ್ರ. ಭಾರತೀಯರ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ಗಂಗೆ (Ganga River) ಅದರದ್ದೇ ಆದ ಪ್ರಾಮುಖ್ಯತೆ ಪಡೆದಿದೆ. ಅಂತಹ ಪರಮ ಪವಿತ್ರವಾದ ಗಂಗಾ ನದಿ ನೀರಿಗೆ 18% ರಷ್ಟು ಜಿಎಸ್ಟಿ ವಿಧಿಸುತ್ತಿದ್ದೀರಿ.
ಗಂಗಾಜಲಕ್ಕೆ 18% ತೆರಿಗೆ (Tax) ವಿಧಿಸಿದ ಖರ್ಗೆ ಆರೋಪಕ್ಕೆ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಸ್ಪಷ್ಟನೆ ನೀಡಿದೆ.ಗಂಗಾಜಲಕ್ಕೆ 18% ತೆರಿಗೆ (Tax) ವಿಧಿಸುತ್ತಿಲ್ಲ ಎಂದು ಮಂಡಳಿ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಬಿಐಸಿ, ಗಂಗಾಜಲ ಅಥವಾ ಯಾವುದೇ ಇತರ ಪೂಜೆ ವಸ್ತುಗಳ ಮೇಲೆ ಯಾವುದೇ ಜಿಎಸ್ಟಿಯನ್ನು ವಿಧಿಸುವುದಿಲ್ಲ ಎಂದು ತಿಳಿಸಿದೆ.
2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆದಿದೆ. ಇವುಗಳನ್ನು ಜಿಎಸ್ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಜಿಎಸ್ಟಿ ಜಾರಿಗೆ ಬಂದಾಗಿನಿಂದಲೂ ವಸ್ತುಗಳಿಗೆ ಜಿಎಸ್ಟಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾಡಿದ ಟ್ವೀಟ್ನಿಂದ ಇದು ಸುದ್ದಿಯಾಗಿತ್ತು. ಇದು ಲೂಟಿಯ ತುತ್ತತುದಿ. ಬೂಟಾಟಿಕೆಯ ಪರಮಾವಧಿ ಎಂದು ಕಾಂಗ್ರೆಸ್ ಈ ಬಗ್ಗೆ ಹೇಳಿತ್ತು.ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಸಿಬಿಐಸಿ ಸ್ಪಷ್ಟನೆ ನೀಡಿದೆ.