ನ್ಯೂಸ್ ನಾಟೌಟ್ :ಹಲವು ಕಾರಣಗಳಿಗಾಗಿ ಬಿಗ್ಬಾಸ್ ಸೀಸನ್ 10 ಈ ಬಾರಿ ತುಂಬಾನೆ ಸ್ಪೆಷಲ್. ಅದಕ್ಕೆ ಕಾರಣ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಮೂರು ಮೂರು ಲವ್ ಸ್ಟೋರಿಗಳು ನಡಿಯುತ್ತಾಯಿವೆ ಅನ್ನೋ ಗುಸುಗುಸು ಸುದ್ದಿ.. ಕಾರ್ತಿಕ್-ಸಂಗೀತಾ, ಮೈಕಲ್-ಇಶಾನಿ ಹಾಗು ಸ್ನೇಹಿತ್-ನಮ್ರತಾ, ಈ ಮೂರು ಜೋಡಿಗಳ ಮಧ್ಯೆ ಲವ್ ಸ್ಟೋರಿ ಶುರುವಾಗಿದೆ ಅನ್ನೋವಾಗಲೇ ಬಿಗ್ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ..!
ಹೌದು,ದೊಡ್ಮನೆಯಲ್ಲಿ ಸಂಗೀತಾ ಅವರು ಕಾರ್ತಿಕ್ ಅವರಿಗೆ ರಾಖಿ ಕಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಹಾಗು ಕಾರ್ತಿಕ್ ಮಹೇಶ್ ಅವರಿಬ್ಬರ ಮಧ್ಯೆ ಲವ್ ಇದೆ ಅಂತ ಹಲವಾರು ಮಂದಿಯ ಅಭಿಪ್ರಾಯವಾಗಿತ್ತು.ಅಷ್ಟರಲ್ಲಾಗಲೇ ಸಂಗೀತಾ ಕಾರ್ತಿಕ್ಗೆ ರಾಖಿ ಕಟ್ಟಿದ್ದಾರೆ. ಸಂಗೀತಾ ಅವರು ಬಿಗ್ ಬಾಸ್ ನಲ್ಲಿ ಆಗಾಗ “ನಾನು ಕಾರ್ತಿಕ್ ಪ್ರೀತಿಸುತ್ತಿಲ್ಲ, ರಿಲೇಷನ್ಶಿಪ್ನಲ್ಲಿ ಇಲ್ಲ” ಅಂತ ಹೇಳುತ್ತಿದ್ದರು. ಸದ್ಯ ಸಂಗೀತಾ ಕಾರ್ತಿಕ್ಗೆ ದಾರ ಕಟ್ಟಿ ಆಶ್ಚರ್ಯ ಸೂಚಿಸಿದ್ದಾರೆ.
ಇದರಲ್ಲಿ ಇನ್ನೂ ಒಂದು ತಮಾಷೆಯಿದೆ.ಸಂಗೀತಾ ಅವರು ಕಟ್ಟಿದ್ದು ರಿಯಲ್ ರಾಖಿ ಅಲ್ಲ ಅಂತೆ.ರಿಯಲ್ ರಾಖಿ ಬಂದಮೇಲೆ ಕಟ್ಟುತ್ತಾರಂತೆ. ಇದನ್ನು ನೋಡಿದ ಬಿಗ್ಬಾಸ್ ಮನೆಯ ಸದಸ್ಯರು ಎಲ್ಲರೂ ನಕ್ಕಿದ್ದಾರೆ. ವಿನಯ್, ಇಶಾನಿ, ನಮ್ರತಾ, ಸ್ನೇಹಿತ್ ಎಲ್ಲರೂ ಸೇರಿ ಕಾರ್ತಿಕ್ಗೆ ರೇಗಿಸಿದರು.ಕಾರ್ತಿಕ್ ಬೇಸರವಾದಂತೆ ನಾಟಕ ಮಾಡಿದರು. ಬಳಿಕ ಸಂಗೀತಾ ಸಹ ನಾಟಕ ಮಾಡಿದ್ದಾರೆ.
ಇದಾದ ನಂತರ ವಿನಯ್ ಹಾಗು ತುಕಾಲಿ ಸಂತು ಇಬ್ಬರು ಸ್ನೇಹಿತ್ಗೆ ನಮ್ರತಾಳನ್ನು ಟ್ರೈ ಮಾಡುವಂತೆ ಹೇಳಿದ್ದಾರೆ. ಅದಕ್ಕೆ ನಮ್ರತಾನೂ ಸಹ ಸ್ನೇಹಿತ್ಗೆ ರಾಖಿ ಕಟ್ಟುವುದಾಗಿ ಹೇಳಿದ್ದಾರೆ. ಸ್ನೇಹಿತ್ಗೆ ಕಾರ್ತಿಕ್ ನೀನು ನನ್ನ ತಂಗಿ ಮದುವೆಯಾಗು, ನಾನು ನಿನ್ನ ತಂಗೀನಾ ಮದುವೆ ಆಗುತ್ತೇನೆ ಎಂದು ಹೇಳಿ ನಕ್ಕುಬಿಟ್ಟರು. ಈ ಸಮಯದಲ್ಲೂ ಸಹ ಕಾರ್ತಿಕ್ ತಮಾಷೆ ಮಾಡುವುದನ್ನು ಬಿಟ್ಟಿಲ್ಲ. ಈ ರೀತಿ ವೀಕ್ಷಕರಲ್ಲಿ ಬಿಗ್ಬಾಸ್ ಕುತೂಹಲ ಮೂಡಿಸಿದೆ.