ನ್ಯೂಸ್ ನಾಟೌಟ್ :ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೊಬ್ಬರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಇವರ ಹೆಸರು ಸೇರಿಕೊಂಡಿರುವುದು ಹೆಮ್ಮೆಯ ವಿಚಾರ..!
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಡಾ.ಜೆ.ಜಿ. ಮಂಜುನಾಥ ಅವರು ಈ ಸ್ಥಾನ ಪಡೆದು ಕೊಂಡು ಈ ಸಾಧನೆ ಮಾಡಿದ್ದಾರೆ.ಯು.ಎಸ್.ಎ.ಯ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸ್ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ (Dr JG Manjunatha) ಅವರು ಸತತ ನಾಲ್ಕನೇ ಬಾರಿ ಈ ಸ್ಥಾನ ಪಡೆದಿದ್ದು,ನಿಜಕ್ಕೂ ಕೊಡಗಿನ ಜನತೆ ಖುಷಿ ಪಡಬೇಕಾದ ವಿಚಾರ.
ಡಾ.ಜೆ.ಜಿ. ಮಂಜುನಾಥ ಅವರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದೀಗ ಅವರು “ಅನಲಿಟಿಕಲ್ ಮತ್ತು ಎನರ್ಜಿ” ವಿಷಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ 2023ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 4,509ನೇ ಸ್ಥಾನವನ್ನು ಪಡೆದು ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.ಮಾತ್ರವಲ್ಲ ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 89,561 ನೇ ಸ್ಥಾನವನ್ನು ಪಡೆದಿದ್ದಾರೆ(ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ) ಅನ್ನೋದು ಗಮನಾರ್ಹ ಸಂಗತಿ.
ಡಾ.ಜೆ.ಜಿ. ಮಂಜುನಾಥ ಅವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅವರ ಕಾಲೇಜ್ಗೆ ತುಂಬಾ ಹೆಮ್ಮೆ ಪಟ್ಟಿದೆ.ಮಾತ್ರವಲ್ಲ ಇಡೀ ಊರಿನ ಕೀರ್ತಿಯನ್ನು ಬೆಳಗಿಸುವಂತೆ ಮಾಡಿದ್ದಾರೆ ಎಂದು ವಿ.ವಿಯ ಕುಲಪತಿ, ಕುಲಸಚಿವರು ಮತ್ತು ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸಮಸ್ತ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.