ನ್ಯೂಸ್ ನಾಟೌಟ್ : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳಲ್ಲಿ 17 ದಿನಗಳು ದಸರಾ ರಜೆ ನೀಡಲಾಗಿದೆ. ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ವಾರ್ಷಿಕ ರಜೆ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 8 ರಿಂದ 24 ರವರೆಗೆ ದಸರಾ ರಜೆ ಘೋಷಣೆ ಮಾಡಿದೆ.
ಅಕ್ಟೋಬರ್ 23 ರಂದು ಮಹಾನವಮಿ (ಆಯುಧಪೂಜೆ), ಅಕ್ಟೋಬರ್ 24 ರಂದು ವಿಜಯದಶಮಿ (ದಸರಾ) ರಜೆ, ಅಕ್ಟೋಬರ್ 28 ರಂದು ಮಹರ್ಷಿ ವಾಲ್ಮೀಕಿ ಜಯಂತಿ ರಜೆ ದಿನಗಳಿವೆ.
ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ 17 ದಿನಗಳ ಜತೆಗೆ ಎರಡು ಭಾನುವಾರದ ರಜೆ ದಿನಗಳು, ಅಕ್ಟೋಬರ್ 28 ರ ಮಹರ್ಷಿ ವಾಲ್ಮೀಕಿ ಜಯಂತಿ ರಜೆ ಸೇರಿ ಒಟ್ಟು 20 ದಿನಗಳ ರಜೆ ಸಿಗಲಿವೆ. ಈ ಮಧ್ಯೆ ಕಾವೇರಿ ಹೋರಾಟ ಮತ್ತು ಬಂದ್ ನಿಂದಾಗಿ ಈ ಹಿಂದೆಯೂ ಹಲವು ಹೆಚ್ಚುವರಿ ರಜೆಗಳು ಹಲವೆಡೆ ಘೋಷಿಸಲಾಗಿತ್ತು.
ನಾಡಹಬ್ಬ ದಸರಾಗೆ (Dasara 2023) ಕೆಲವೇ ದಿನಗಳು ಬಾಕಿ ಇವೆ. ಪ್ರತಿವರ್ಷ ದಸರಾ ಹಿನ್ನೆಲೆ ರಾಜ್ಯದ ಎಲ್ಲಾ ಶಾಲೆಗಳಿಗೆ 14 ದಿನ ರಜೆ (Dasara Holiday) ನೀಡಲಾಗುತ್ತದೆ. ಈ ಬಾರಿಯೂ 17 ದಿನ ರಜೆ ಘೋಷಿಸಲಾಗಿದೆ. ಇದರ ಜೊತೆಗೆ ಬೇಸಿಗೆ ರಜೆ ದಿನಾಂಕ 11-04-2024 ರಿಂದ ದಿನಾಂಕ 28-05-2024ರ ವರೆಗೆ ಬೇಸಿಗೆ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದೆ.