ನ್ಯೂಸ್ ನಾಟೌಟ್ : ಅಪ್ಪನೇ ತನ್ನ ಮಗನನ್ನು ಕೊಲೆ ಮಾಡಿರುವ ಭೀಕರ ಘಟನೆಯೊಂದು ವರದಿಯಾಗಿದೆ.ತಂದೆ ಮತ್ತು ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಕೊಲೆಯಲ್ಲಿ (Murder)ಅಂತ್ಯವಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸಂಬವಿಸಿದೆ.ಅಕ್ಟೋಬರ್ 29 ರಂದು ರಾತ್ರಿ ಈ ಘಟನೆ ವರದಿಯಾಗಿದ್ದು, ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರ್(75ವ) ಅವರ ಪುತ್ರ ಜಗದೀಶ್(30ವ) ಮೃತ ದುರ್ದೈವಿ.
ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ-ಮಗನ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.ಬಳಿಕ ಗಲಾಟೆ ಜೋರಾಗಿದ್ದು, ತಂದೆಯೇ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.ಜಗದೀಶ್ ಅವರ ತಂದೆ ಕೃಷ್ಣಯ್ಯಾಚಾರ್ ಚೂರಿಯಿಂದ ಇರಿದು ಮಗನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಅ.29 ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ(75) ಮಲಗಿದ್ದ ಸಂದರ್ಭ ಮಗ ಜಗದೀಶ್ ಆಚಾರಿ(31) ನಡುವೆ ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ಗಲಾಟೆ ನಡೆದಿದೆ.ಈ ವೇಳೆಗಾಗಲೇ ತಂದೆ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಬಳಿಕ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.
ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡಿದ್ದು, ಮಗ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.ಈ ಸಂದರ್ಭ ಕೋಪಗೊಂಡ ಅಪ್ಪ ಕೃಷ್ಣಯ್ಯ ತನ್ನ ಕೋಣೆಯ ಕಪಾಟಿನಲ್ಲಿ ಇರಿಸಿದ್ದ ಚೂರಿಯಿಂದ ಮಗನ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಜಗದೀಶನಿಗೆ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಚೂರಿಯಿಂದ ತಂದೆ ಇರಿದಿದ್ದು, ಇರಿತಕ್ಕೆ ಒಳಗಾಗಿ ಜಗದೀಶ್ ಕುಸಿದು ಬಿದ್ದಿದ್ದಾನೆ.ಈ ವೇಳೆ ಗಂಭೀರ ಗಾಯಗೊಂಡ ಜಗದೀಶ್ ಅನ್ನು ತಕ್ಷಣವೇ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಈ ಸಂದರ್ಭ ಜಗದೀಶ್ ಆಚಾರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನು ಮಗನನ್ನು ಕೊಲೆ ಮಾಡಿದ ತಂದೆ ಕೃಷ್ಣಯ್ಯ ಅಚಾರಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.