ನ್ಯೂಸ್ ನಾಟೌಟ್ :ನಟ ರಜನಿಕಾಂತ್ ಅಂದ ಕೂಡಲೇ ತಕ್ಷಣ ನೆನಪಾಗೋದು ಸೃಜನಶೀಲತೆ.ಯಾಕೆಂದ್ರೆ ಅವರ ಹಲವಾರು ಚಿತ್ರಗಳು ಏನೋ ಒಂದು ವಿಭಿನ್ನ.ಬಾಕ್ಸಾಫೀಸನ್ನೇ ಕೊಳ್ಳೆ ಹೊಡೆಯುತ್ತವೆ.ಹೀಗಾಗಿ ಈಗಿನ ಜನರೇಶನ್ ಅವರನ್ನು ಹೆಚ್ಚು ಇಷ್ಟ ಪಡುತ್ತಾರೆ.ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲಾ ವರ್ಗದ ಜನ ರಜನಿಕಾಂತ್ಗೆ ಫೇವರಿಟ್..!ಹೀಗಾಗಿ ರಜನಿಕಾಂತ್ ಅಂದ್ರೆ ಗೊತ್ತಿಲ್ಲ ಅನ್ನೋರೇ ಕಡಿಮೆ ಮಂದಿ.
ಸದ್ಯಕ್ಕೆ ಅವರ ಅಭಿನಯದಲ್ಲಿ ಮೂಡಿ ಬಂದ ಚಿತ್ರ ಯಜಮಾನ (ತಲೈವಾ) ಚಿತ್ರ ಸಕತ್ ಸದ್ದು ಮಾಡಿತ್ತು.ಇದೀಗ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ತನ್ನ 72ನೇ ವಯಸ್ಸಿನಲ್ಲಿಯೂ ಜೈಲರ್ ಚಿತ್ರದ ಮೂಲಕ ಹಲವು ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ ಎಂದರೆ ಅವರ ಪವರ್ ಏನು ಅನ್ನೋದು ಅದರಲ್ಲೇ ಗೊತ್ತಾಗುತ್ತೆ.
ಹೀಗಾಗಿ ಈ ವಯಸ್ಸಿನಲ್ಲೂ ಅವರು ಹೆಚ್ಚೆಚ್ಚು ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ.ಹೀಗಾಗಿ ಅವರ ಸರಳ ಸ್ವಭಾವಕ್ಕೆ ಎಲ್ಲರೂ ಮಾರು ಹೋಗುತ್ತಿದ್ದಾರೆ.ಎಷ್ಟೇ ದೊಡ್ಡ ಸ್ಟಾರ್ ಆದರೂ ತಮ್ಮ ಹಿಂದಿನ ಕಷ್ಟದ ದಿನಗಳನ್ನು ಅವರು ಎಂದಿಗೂ ಮರೆತೇ ಇಲ್ಲ.
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ ತಾವು ಕೆಲಸ ಮಾಡಿದ ಜಯನಗರ ಬಿಎಂಟಿಸಿ ಬಸ್ ಡಿಪೋದಲ್ಲಿ ಅಡ್ಡಾಡಿದ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿರೋ ಫೋಟೋ ಎಲ್ಲಾ ಕಡೆ ವೈರಲ್ ಆಗಿತ್ತು.ಬೆಂಗಳೂರಿನೊಂದಿಗೆ ನಂಟು ಹೊಂದಿರುವ ರಜನಿಕಾಂತ್ ಇಂದಿಗೂ ಆಗಾಗ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ರಜನಿಕಾಂತ್ ಅವರ ಜೀವನದಲ್ಲಿ ಅನೇಕ ಸ್ವಾರಸ್ವಕರ ಘಟನೆಗಳು ನಡೆದಿದ್ದಾವೆ.ಅದನ್ನು ಕೇಳೋದೇ ಅಭಿಮಾನಿಗಳಿಗೆ ಒಮದು ಹಬ್ಬವಿದ್ದಂತೆ.ಅವರ ಜೀವನದಲ್ಲಾದ ಮಹತ್ವದ ಸಂಗತಿಗಳನ್ನು ಕೇಳೋದು ಹಾಗೂ ಕೆಲವು ಪ್ರೇರಣಾದಾಯಕ ಕಥೆಗಳು ಎಲ್ಲರಿಗೂ ಸ್ಪೂರ್ತಿಯಾಗುತ್ತವೆ. ರಜನಿಕಾಂತ್ ಅವರು ದಾನಿ ಕೂಡ ಹೌದು. ರಜನೀಕಾಂತ್ ಅವರ ಒಟ್ಟು ಆಸ್ತಿ ಮೌಲ್ಯ 365 ಕೋಟಿ ರುಪಾಯಿ. ಪ್ರತಿ ಸಿನಿಮಾಕ್ಕೆ ಸುಮಾರು 50 ರಿಂದ 55 ಕೋಟಿ ಯಷ್ಟು ಸಂಭಾವನೆ ಪಡೆಯುತ್ತಾರೆ.ಆದರೆ ಅವರು ತಮ್ಮ ಆಸ್ತಿಯನ್ನು ಅದೆಷ್ಟೋ ಮಂದಿಗೆ ದಾನ ಮಾಡಿದ್ದಾರೆ..!
ಇದೀಗ ಅವರ ಕುರಿತು ಇನ್ನೊಂದು ಇಂಟರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ. ಅದೇನೆಂದರೆ, ರಜನೀಕಾಂತ್ ಅವರನ್ನು ಮಹಿಳೆಯೊಬ್ಬರು ಭಿಕ್ಷುಕನೆಂದು ತಿಳಿದು ಕೊಂಡಿದ್ದು,ಅಷ್ಟು ಮಾತ್ರವಲ್ಲ ಅವರು ಕುಳಿತುಕೊಂಡಿರುವ ವೇಳೆ 10 ರೂಪಾಯಿಯನ್ನು ಕೂಡ ನೀಡಿದ್ದರಂತೆ..! ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.ಸರಳ ವ್ಯಕ್ತಿತ್ವ ಹೊಂದಿದ್ದ ರಜನಿಕಾಂತ್ ಅವರು ಯಾವಾಗಲೂ ಅವರ ಉಡುಗೆ ತೊಡುಗೆಗಳು ಕೂಡ ಸರಳವಾಗಿಯೇ ಇರುತ್ತದೆ.ತಾನೂ ಕೋಟ್ಯಧೀಶ್ವರನಾದ್ರೂ ಕೂಡ ಸರಳವಾಗಿಯೇ ಅವರು ಕಾಣಿಸಿಕೊಳ್ಳುತ್ತಾರೆ.
ಹೀಗೆ ಅವರನ್ನು ದೇವಾಸ್ಥಾನಕ್ಕೆ ಅಂತ ಮಹಿಳೆ ಹೋಗಿರುತ್ತಾರೆ.ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಎದುರಿನಲ್ಲಿ ರಜನಿಕಾಂತ್ ಅವರು ಕಂಬದ ಬಳಿ ಕುಳಿತುಕೊಂಡಿದ್ದರಂತೆ..!ಈ ವೇಳೆ ಮಹಿಳೆ ಈತ ಭಿಕ್ಷುಕ ಎಂದು ತಿಳಿದು ಅವರಿಗೆ ೧೦ ರೂ. ನೀಡಿದ್ದಾರೆ..!
ಇದನ್ನು ಅಲ್ಲಿದ್ದ ಯುವತಿಯೊಬ್ಬರು ನೋಡುತ್ತಿದ್ದರು. ಅವರಿಗೆ ಇವರು ರಜನೀಕಾಂತ್ ಎಂದು ತಿಳಿದಿತ್ತು. ಅಯ್ಯೋ ದೇವ್ರೆ ಕೋಟಿ ಬೆಲೆ ಬಾಳುವ ವ್ಯಕ್ತಿಗೆ ಈ ಮಹಿಳೆ ೧೦ ರೂ. ನೀಡಿದ್ದಾರೆ ಎಂದು ಯುವತಿ ಮಹಿಳೆಗೆ ಸತ್ಯ ಹೇಳುತ್ತಾಳೆ.ರಜನಿಕಾಂತ್ ಯಾರು ಅನ್ನೋದನ್ನು ಮನದಟ್ಟು ಮಾಡುತ್ತಾಳೆ. ಈ ವೇಳೆ ಮಹಿಳೆಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ರಜನಿಕಾಂತ್ರತ್ತ ಹೆಜ್ಜೆ ಹಾಕಿದ್ರು.ಆದರೆ ರಜನೀಕಾಂತ್ ಅವರು ಮಹಿಳೆಗೆ ಏನೂ ಹೇಳದೇ ಅಲ್ಲಿಂದ ಎದ್ದು ಕಾರಿನ ಕಡೆ ಹೋಗಿದ್ದರಂತೆ. ಮಹಿಳೆ ಕಾರಿನೆಡೆಗೆ ಹೋದರಂತೆ. ರಜನಿಕಾಂತ್ ಬಳಿಗೆ ತೆರಳಿ ಕ್ಷಮೆ ಯಾಚಿಸಿದ್ದಾರೆ. ರಜನಿಕಾಂತ್ ಅದಕ್ಕೆ ಸಹಜ ನಗುವಿನ ಮೂಲಕವೇ ಪ್ರತಿಕ್ರಿಯೆ ನೀಡಿದ್ದರಂತೆ. ಈ ವಿಷಯವನ್ನು ಯುವತಿ ಈಗ ಬಹಿರಂಗಪಡಿಸಿದ್ದಾರೆ.
ರಜನೀಕಾಂತ್ ಅವರ ಲುಕ್ಕು ತೆರೆಯ ಮೇಲೆ ಬೇರೆಯದ್ದೇ ರೀತಿ ಇರುತ್ತದೆ. ಆದರೆ ಅವರು ಅಸಲಿ ಜೀವನದಲ್ಲಿ ಹೇಗೆ ಇದ್ದೇವೋ ಹಾಗೆಯೇ ಇರುತ್ತಾರೆ. ಮೇಕಪ್ಪೂ ಇಲ್ಲ, ತಲೆಯ ಮೇಲೆ ಕೂದಲು ಇಲ್ಲ, ಪಂಚೆ ಸುತ್ತಿ ಹೋದರೆ ಅವರು ರಜನೀಕಾಂತ್ ಎಂದು ಗುರುತಿಸುವುದೇ ಎಷ್ಟೋ ಮಂದಿಗೆ ಕಷ್ಟ.