ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ಸೂರ್ಯ ಗ್ರಹಣವಾಯ್ತು, ಈಗ ಶನಿವಾರ ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ಅಕ್ಟೋಬರ್ 28ಕ್ಕೆ ಚಂದ್ರಗ್ರಹಣ (Lunar Eclipse 2023) ನಡೆಯಲಿದೆ.
ಅಕ್ಟೋಬರ್ 28 ರಂದು ಚಂದ್ರಗ್ರಹಣ ನಡೆಯಲಿದ್ದು, ಅಕ್ಟೋಬರ್ 29ಕ್ಕೂ ಇದರ ಪ್ರಭಾವ ತಟ್ಟಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣ ಅಮಂಗಳ, ಸೂತಕದ ಛಾಯೆ ಎನ್ನುವ ನಂಬಿಕೆ ಇದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು ಭಾರತದಲ್ಲಿಯೂ ಗೋಚರಿಸಲಿದೆ.
ಗ್ರಹಣದ ಅವಧಿ (ವಿಜ್ಞಾನಿಗಳ ಪ್ರಕಾರ): ಅಕ್ಟೋಬರ್ -28ರ ರಾತ್ರಿ 11.30ಕ್ಕೆ ಸಂಭವಿಸಿ ಅಕ್ಟೋಬರ್ 29 ರ 2.30ರವರೆಗೆ ಇರಲಿದೆ. ಗ್ರಹಣದ ಅವಧಿ (ಜ್ಯೋತಿಷಿಗಳ ಪ್ರಕಾರ): ಮಧ್ಯರಾತ್ರಿ 1.04 ಕ್ಕೆ ಆರಂಭ. 2:22ಕ್ಕೆ ಅಂತ್ಯವಾಗಲಿದೆ ಎಂದಿದೆ.
ರಾಹುಗ್ರಸ್ಥ ಚಂದ್ರಗ್ರಹಣ ಎನ್ನಲಾಗಿದ್ದು, ಭಾರತದಲ್ಲೂ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸಲಿದ್ದು, ಗಜಕೇಸರಿ ಯೋಗದಲ್ಲಿ ಈ ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು ಎಂದು ಜೋತಿಷ್ಯ ಶಾಸ್ತ್ರ ಹೇಳಿದೆ.
ಸಾಮಾನ್ಯವಾಗಿ ಗಜಕೇಸರಿ ಯೋಗದಲ್ಲಿ ಗ್ರಹಣ ಬಹಳ ಅಪರೂಪವಾಗಿದೆ. 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿದೆ. ವಿಜ್ಞಾನಿಗಳ ಪಾಲಿಗೆ ಇದು ವಿಸ್ಮಯವಾಗಲಿದೆ. ಈಗಾಗಿ ನೆಹರೂ ತಾರಾಲಯದಲ್ಲಿ ಕೂಡ ಗ್ರಹಣ ವೀಕ್ಷಣೆಗೆ ಅವಕಾಶವಿರಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿದ ಸುಳ್ಯದ ಮಹಿಳೆ,ಉದ್ಯಮಿಯೊಬ್ಬರ ಪತ್ನಿಯ ಈ ನಿರ್ಧಾರಕ್ಕೆ ಕಾರಣವೇನು?