ನ್ಯೂಸ್ ನಾಟೌಟ್: ಗೋಡ್ಸೆಯ ಹಿಂದೂ ಧರ್ಮದ ಬಗೆಗಿನ ಆಲೋಚನೆಗಳನ್ನು ಸಂಭ್ರಮಿಸಬಹುದು ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಔರಂಗಜೇಬನ ಅಖಂಡ ಭಾರತ ಹಾಗೂ ಟಿಪ್ಪು ಸುಲ್ತಾನ್ ಖಡ್ಗ ಹಿಡಿದು ಸಂಭ್ರಮಿಸುವವರನ್ನು ಸರ್ಕಾರ ಓಲೈಸುವುದು ಅತ್ಯಂತ ನೀಚ ಕೃತ್ಯ. ಗೋಡ್ಸೆಯ ಗಾಂಧಿ ವಿರೋಧಿ ವಿಚಾರ ಬಿಟ್ಟರೆ ಎಲ್ಲಾ ವಿಚಾರಗಳನ್ನು ಸಂಭ್ರಮಿಸಬಹುದು ಎಂದಿದ್ದಾರೆ.
ಪ್ಯಾಲೆಸ್ಟೈನ್ ಮಾಡಿದ ಹೇಯ ಕೃತ್ಯ ಜಗತ್ತಿಗೆ ತಿಳಿದಿದೆ. ಇದು ಮನುಷ್ಯರು ಮಾಡುವ ಕೃತ್ಯ ಅಲ್ಲ, ರಾಕ್ಷಸರು ಮಾಡುವ ಕೃತ್ಯವಾಗಿದೆ. ಇದಕ್ಕೆ ಕಾಂಗ್ರೆಸ್ (Congress) ಬೆಂಬಲ ನೀಡುತ್ತಿದೆ. ಇದು ಭಾರತದ ಇತಿಹಾಸದ ಪಾಲಿಗೆ ಕಪ್ಪು ಚುಕ್ಕಿಯಾಗಿದೆ.
ಗಲಭೆಕೋರರು ಕಾಂಗ್ರೆಸ್ ಬ್ರದರ್ಸ್ ಎನ್ನುವುದು ಅವರ ನೀತಿ. ಅದು ಮಹಿಷ ಆಗಿರಲಿ ಇಲ್ಲವೇ ಹಮಾಸ್ ಉಗ್ರರಾಗಿರಲಿ ಅವರ ಪರ ನಿಲ್ಲುತ್ತದೆ. ಕಾಂಗ್ರೆಸ್ಗೆ ಅವಕಾಶ ಸಿಕ್ಕರೆ ಹಮಾಸ್ ಪರವಾಗಿ ಜಯಂತಿ ಮಾಡುತ್ತಾರೆ ಎಂದು ಹೇಳಿದೆ.