ನ್ಯೂಸ್ ನಾಟೌಟ್: ಮಂಡೆಕೋಲಿಗೆ ತೆರಳುವ ಖಾಸಗಿ ಬಸ್ ಕಂಡಕ್ಟರ್ ರಿಕ್ಷಾ ಚಾಲಕನಿಗೆ ಸುಳ್ಯದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ರಿಕ್ಷಾ ಚಾಲಕ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಇಂದು ನಡೆದಿದೆ.
ಸುಳ್ಯ ಪೋಲಿಸ್ ಠಾಣೆ ಮುಂದೆ ರಿಕ್ಷಾ ಚಾಲಕನ ಮೇಲೆ ಹಲ್ಲೆ ಖಂಡಿಸಿ ರಿಕ್ಷಾ ಚಾಲಕರು ಸೇರಿದ್ದು, ಮಂಡೆಕೋಲು ತೆರಳುವ ಮಹಾಲಕ್ಷ್ಮಿ ಬಸ್ ಕಂಡಕ್ಟರ್ ಸುಳ್ಯದ ತುದಿಯಡ್ಕದ ರಿಕ್ಷಾ ಚಾಲಕ ಪ್ರಸನ್ನರಿಗೆ ಹಲ್ಲೆ ಮಾಡಿರುವ ಬಗ್ಗೆ ದೂರು ಕೇಳಿಬಂದಿದೆ.
ರಿಕ್ಷಾಚಾಲಕರು ಘಟನೆಯನ್ನು ಖಂಡಿಸಿ ಹಲ್ಲೆ ನಡೆಸಿರುವ ಕಂಡೆಕ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಬಾಡಿಗೆ ತೆರಳುತ್ತಿದ್ದಾಗ ಸರ್ವೀಸ್ ಗೆ ಪ್ರಯಾಣಿಕರನ್ನು ಹತ್ತಿಸಿದ್ದಾರೆ ಎಂದು ಹಲ್ಲೆ ನಡೆದಿದೆ ಎಂದು ವರದಿ ತಿಳಿಸಿದೆ.